ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡಿ ವಿಶ್ವ ಸ್ಟ್ರೊಕ್​ ದಿನ ಕಾರ್ಯಕ್ರಮದಲ್ಲಿ ಪಾರ್ಶ್ವವಾಯು ರೋಗಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರ ಬಿಡುಗಡೆ ಮಾಡಲಾಯಿತು. ಡಾ.ಪದ್ಮಾನಂದ ಗಾಯಕ್ವಾಡ್​, ಡಾ.ವರ್ಧಮಾನ, ಡಾ.ವಿಜಯಲಕ್ಷ್ಮೀ, ಡಾ.ಮಂಜುನಾಥ, ಡಾ.ಶ್ವೇತಾ, ನಾಗರತ್ನ, ಶ್ರೀಲಕ್ಷ್ಮೀ ಇತರರಿದ್ದರು. 
ಯಾದಗಿರಿ

ಪಾರ್ಶ್ವವಾಯುಗೆ ಶೀಘ್ರ ಚಿಕಿತ್ಸೆ ಪಡೆಯಿರಿ

ಯಾದಗಿರಿ: ಪಾರ್ಶ್ವವಾಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಲಕ್ಷಣಗಳನ್ನು ಆರಂಭದಲ್ಲೆ ಗುರುತಿಸಿ ತಕ್ಷಣ ಸೂಕ್ತ ವೈದ್ಯಕಿಯ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಪದ್ಮಾನಂದ ಗಾಯಕ್ವಾಡ್​ ತಿಳಿಸಿದರು.

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಹಾಗೂ ಯಿಮ್ಸ್​ ಆಸ್ಪತ್ರೆಯಿಂದ ವಿಶ್ವ ಸ್ಟ್ರೊಕ್​ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾರ್ಶ್ವವಾಯು (ಸ್ಟ್ರೊಕ್​) ಕುರಿತು ಜಾಗೃತಿ ಕುರಿತು ಮಾತನಾಡಿದದರು. ಮೆಡಿಕಲ್​ ಆಫೀಸರ್​ ಡಾ.ವರ್ಧಮಾನ ಮಾತನಾಡಿ, ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಬಲ ಕಡಿಮೆಯಾಗುವುದು. ಮಾತನಾಡಲು ತೊಂದರೆಯಾಗುವುದು ಹಾಗೂ ಹಠಾತ್​ ತಲೆಸುತ್ತು ಉಂಟಾಗುವುದು ಪಾರ್ಶ್ವವಾಯುವಿನ ಪ್ರಮುಖ ಲಣಗಳಾಗಿರಬಹುದು. ಇಂತಹ ಲಣ ಕಂಡುಬಂದಲ್ಲಿ ವಿಳಂಬ ಮಾಡದೇ ತಣ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದರು.

ಮೆಡಿಸಿನ್​ ಎಚ್​ಒಡಿ ಡಾ. ವಿಜಯಲಕ್ಷಿ$್ಮ ಮಾತನಾಡಿ, ರಕ್ತದೊತ್ತಡ, ಮಧುಮೇಹ ಹಾಗೂ ಕೊಲೆಸ್ಟ್ರಾಲ್​ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಆಹಾರ ಸೇವಿಸುವುದರಿಂದ ಸ್ಟ್ರೊಕ್​ನ ಅಪಾಯ ಕಡಿಮೆ ಮಾಡಬಹುದು ಎಂದರು.

ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆಥೋರ್ಪೆಡಿಕ್​ ಡಾ.ಮಂಜುನಾಥ ತಿಳಿಸಿದರು. ಫಿಜಿಯೋಥೆರೆಪಿಸ್ಟ್​ ಮೋಹನ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾರ್ಶ್ವವಾಯುವಿನ ಲಣ, ತಡೆಗಟ್ಟುವ ಕ್ರಮ, ಆರಂಭಿಕ ಗುರುತಿಸುವಿಕೆ ಹಾಗೂ ತುರ್ತು ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಎಬಿಆರ್​ಕೆ ಜಿಲ್ಲಾ ಸಂಯೋಜಕಿ ಡಾ.ಶ್ವೇತಾ, ಜಿಲ್ಲಾ ಸಂಯೋಜಕಿ ನಾಗರತ್ನ, ಸೈಕಾಲೋಜಿಸ್ಟ್​ ಶ್ರೀಲಕ್ಷಿ$್ಮ, ಸಿದ್ಧಾರೂಢ ಇತರರಿದ್ದರು.