ಯಾದಗಿರಿ ತಾಲೂಕಿನ ಎಂ.ಹೊಸಳ್ಳಿ ಗ್ರಾಮದ ಸಮೀಪದಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ತ್ಯಾಜ್ಯ ಶುದ್ಧೀಕರಣ ಘಟಕ ಕಾಮಗಾರಿ ಕೂಡಲೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸೇನೆ ಜಿಲ್ಲಾ ಟಕದ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿತು. ಮಲ್ಲಿಕಾರ್ಜುನ ಜಲ್ಲಪ್ಪನೋರ, ವೀರೇಶ ಸಜ್ಜನ್​ ಕಡೇಚೂರು, ಭೀಮರಡ್ಡಿ ಪೊಲೀಸ್​ ಪಾಟೀಲ್​, ಬಾಲಪ್ಪ ಟುಬಾಕ್​, ಮಲ್ಲರಡ್ಡಿ ಕಾಮರಡ್ಡಿ, ಯಂಕಪ್ಪ ದೊರೆ ಇತರರಿದ್ದರು. 
ಯಾದಗಿರಿ

ಯುಜಿಡಿ ಸಂಸ್ಕರಣಾ ಘಟಕ ಸ್ಥಳಾಂತರಿ

ಯಾದಗಿರಿ: ತಾಲೂಕಿನ ಎಂ.ಹೊಸಳ್ಳಿ ಗ್ರಾಮದ ಸಮೀಪದಲ್ಲಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ತ್ಯಾಜ್ಯ ಶುದ್ಧೀಕರಣ ಘಟಕ ಕಾಮಗಾರಿ ಕೂಡಲೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ತಾಲೂಕಿನ ಎಂ.ಹೊಸಳ್ಳಿ ಗ್ರಾಮಸ್ಥರು ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್​, ಈಗಾಗಲೇ 4-5 ವರ್ಷಗಳಿಂದ ವಿರೋಧ ಮಾಡುತ್ತಲೇ ಬಂದರೂ ಸರ್ಕಾರ ಹಾಗೂ ನಗರಸಭೆಯವರು ಗ್ರಾಮಸ್ಥರ ಅಳಲಿಗೆ ಕಿವಿಗೊಡದೆ ಕಾಮಗಾರಿ ಮುಂದುವರೆಸುತ್ತಿರುವುದು ಸರಿಯಲ್ಲ. ಗ್ರಾಮ ದಿನೇದಿನೆ ಬೆಳವಣಿಗೆ ಹೊಂದುತ್ತಿದ್ದು, ಮುಂಬರುವ ದಿನಗಳಲ್ಲಿ ಸಧ್ಯ ಉದ್ದೇಶಿತ ಯುಜಿಡಿ ತ್ಯಾಜ್ಯ ಶುದ್ಧೀಕರಣ ಟಕ ಗ್ರಾಮದ ಮಧ್ಯದಲ್ಲಿ ಸೇರುವ ಸಾಧ್ಯತೆ ಇದೆ. ಅಲ್ಲದೆ ಈ ಟಕ ಗ್ರಾಮದ 100 ಮೀಟರ್​ ಅಂತರದಲ್ಲಿ ಹೊಸ ಲೇಔಟ್​ಗಳು ಆಗುತ್ತಿವೆ. ಇದರಿಂದ ಗ್ರಾಮದ ಸಮೀಪ ಪ್ಲಾಂಟ್​ ಆಗುವುದರಿಂದ ಜನರ ಆರೋಗ್ಯ, ಪರಿಸರ ಹಾಗೂ ಜನ ಜೀವನದ ಮೇಲೆ ಪ್ರಭಾವ ಬೀರಲಿದೆ ಎಂದರು.

ಇಲ್ಲಿ ಒಳಚರಂಡಿ ತ್ಯಾಜ್ಯ ಸಂಸ್ಕರಣೆ ಮಾಡುವುದರಿಂದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಈಗಾಗಲೇ ಗ್ರಾಮಸ್ಥರು ಎರಡು ಬಾರಿ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ಮನವಿ ಮಾಡಿದರೂ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿರುತ್ತಾರೆ ಎಂದು ಹೇಳಿದರು.

ಇದನ್ನು ಸರ್ಕಾರಿ ಸ್ವಾಮ್ಯದ ಸರ್ಕಾರಿ ಗೈರಾಣ ಜಮೀನಿಗೆ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ನಿತ್ಯ ವಿಷಗಾಳಿ ಸೇವಿಸುವ ಬದಲಿಗೆ ಡಿಸಿ ಕಚೇರಿ ಎದುರು ವಿಷ ಸೇವಿಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸೈದಾಪುರ ವಲಯ ಅಧ್ಯಕ್ಷ ವೀರೇಶ ಸಜ್ಜನ್​ ಕಡೇಚೂರು, ಭೀಮರಡ್ಡಿ ಪೊಲೀಸ್​ ಪಾಟೀಲ್​, ಬಾಲಪ್ಪ ಟುಬಾಕ್​, ಮಲ್ಲರಡ್ಡಿ ಕಾಮರಡ್ಡಿ, ಯಂಕಪ್ಪ ದೊರೆ, ಭರತೇಶ ಪೊಲೀಸ್​ ಪಾಟೀಲ್​, ಗುರುಲಿಂಗಯ್ಯ ಸ್ವಾಮಿ, ಭೀಮರಡ್ಡಿ ರಾಜೊಳ್ಳಿ, ಮಲ್ಲು ಚಟ್ನಳ್ಳಿ, ವಿಶ್ವನಾಥರಡ್ಡಿ ಪೊಲೀಸ್​ ಪಾಟೀಲ್​, ಜಯರಾಂ ನಾಯ್ಕರ್​, ಹೀರಾನಾಯ್ಕ, ದೇವಿಂದ್ರಪ್ಪ ನಾಟೇಕರ್​, ಬಸವರಾಜ ಹೊಸಳ್ಳಿ, ಮಹಾದೇವಪ್ಪ, ಕಾಶಪ್ಪ ಜಿನಿಕೇರಿ, ಯೇಸುಮಿತ್ರ ಆಶನಾಳ. ಮಲ್ಲಿಕಾರ್ಜುನ್​ ಬಬಲಾದ್​, ಶ್ರೀಶೈಲ, ಪಾಂಡು ಅರಕೇರಿ, ಚಂದ್ರು ಕಡೆಚೂರು, ಹುಸೇನಪ್ಪ ಕಡೆಚೂರ್​. ಮಣಿ ಸೈದಾಪುರ, ಸಿದ್ದರಾಮ್​ ಹಳಿಗೇರಿ, ಅಂಜು ಚಾಮನಾಳ, ರಫೀಕ್​ ಮಸ್ಕನಹಳ್ಳಿ, ಬಂಗಾರಪ್ಪ, ಕರಿಯಪ್ಪ ತಳವಾರ್​ ಇತರರಿದ್ದರು.