ಶಹಾಪುರದಲ್ಲಿ ಶುಕ್ರವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಖಜಾನೆ ಅಧಿಕಾರಿಗಳಾದ ಡಾ.ಮೋನಪ್ಪ ಶಿರವಾಳ, ದೇವೇಂದ್ರಪ್ಪ ತೋಟಗೇರ, ಗುರು ಅಂಗಡಿ, ಶಿರಸ್ತೆದಾರ ನಾಗೇಂದ್ರಪ್ಪ, ರಾವೇಂದ್ರ ಪತ್ತಾರ, ಭೀಮರಾಯ ಗೂಡೆಕಾರ,ಸುಭಾಷ್​ ಧೂಳಾ ಇತರರಿದ್ದರು. 
ಯಾದಗಿರಿ

ಹೋರಾಟದ ಕಿಚ್ಚು ಹಚ್ಚಿದ ರಾಣಿ ಚನ್ನಮ್ಮ

ಶಹಾಪುರ: ಮೊಟ್ಟ ಮೊದಲು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಕಿಚ್ಚು ಹಚ್ಚಿದ್ದೆ ಕಿತ್ತೂರು ರಾಣಿ ಚನ್ನಮ್ಮ ಎಂದು ಹಿರಿಯ ಸಂಶೋಧಕ, ಸಾಹಿತಿ ಮತ್ತು ಖಜಾನೆ ಅಧಿಕಾರಿ ಡಾ.ಮೋನಪ್ಪ ಶಿರವಾಳ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ$್ಯ ತಂದುಕೊಟ್ಟ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಳ ಆದರ್ಶ ಮತ್ತು ತತ್ವಗಳು ನಮಗೆಲ್ಲರಿಗೂ ದಾರಿ ದೀಪಗಳಾಗಿವೆ ಎಂದು ಬಣ್ಣಿಸಿದರು.

ಸಾಹಿತಿ ಮತ್ತು ಪತ್ರಕರ್ತ ಬಸವರಾಜ ಸಿನ್ನೂರ ಮಾತನಾಡಿ, ಚನ್ನಮ್ಮ ಬಾಲ್ಯದಲ್ಲೆ ಕುದುರೆ ಸವಾರಿ ಬಿಲ್ಲುಗಾರಿಕೆ, ಕತ್ತಿ ವರಸೆಗಳಲ್ಲಿ ನಿಪುಣರಾಗಿದ್ದು, ದೇಶಪ್ರೇಮ ಮತ್ತು ಧೈರ್ಯ ಸಾಹಸ ನಿಜಕ್ಕೂ ಮೆಚ್ಚುವಂತದ್ದು, ಆದ್ದರಿಂದ ಮಹಿಳಾ ಸಮಾನತೆ, ಸಿ ಶಕ್ತಿ ಮತ್ತು ಧೀರ ಹಾಗೂ ದಿಟ್ಟ ನಾಯಕತ್ವಕ್ಕೆ ದೊಡ್ಡ ಪ್ರೇರಣದಾಯಕವಾಗಿದೆ ಎಂದರು.

ಬ್ರಿಟಿಷರು ಭಾರತೀಯ ಸಂಸ್ಥಾನವನ್ನು ವಶಪಡಿಸಿಕೊಳ್ಳುವ ಹಾಗೂ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕ್ರೂರ ನೀತಿಯನ್ನು ಧಿಕ್ಕರಿಸಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ಬಂಡಾಯ ಸಾರಿದ ಪ್ರಪ್ರಥಮ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮಳ ಅಪ್ರತಿಮ ದೇಶಭಕ್ತಿ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿಯಾಯಿತು ಎಂದು ನುಡಿದರು.

ವೇದಿಕೆಯಲ್ಲಿ ಹಿರಿಯ ಮುಖಂಡರಾದ ದೇವೇಂದ್ರಪ್ಪ ತೋಟಗೇರ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಟಕದ ಅಧ್ಯ ಗುರು ಅಂಗಡಿ, ಶಿರಸ್ತೇದಾರ ನಾಗೇಂದ್ರಪ್ಪ, ರಾವೇಂದ್ರ ಪತ್ತಾರ, ಭೀಮರಾಯ ಗೂಡೆಕಾರ, ಸುಭಾಷ್​ ಧೂಳಾ, ಶರಣು ಹೊಸೂರ, ಅನಿಲ್​ ಬಿರಾದಾರ, ಶಾಂತಗೌಡ ದಿಗ್ಗಿ, ಭೀಮಾಶಂಕರ ಹೊಸಕೆರ, ಮಹಾಲಿಂಗ ಬೇವಿನಹಳ್ಳಿ, ಜಗದೀಶ,ಅಶೋಕ ಪ್ಯಾಟಿ ಇತರರಿದ್ದರು.