ಶಹಾಪುರ: ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಶಹಾಪುರ ಸಿಟಿ ಇವರ ಸಹಯೋಗದಲ್ಲಿ ಸಗರ ಗ್ರಾಮದಲ್ಲಿ ಮಂಗಳವಾರ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ವೇಳೆ 63 ಹಸುಗಳಿಗೆ ಜಂತುನಾಶಕ ಔಷಧ, 136 ಎತ್ತುಗಳಿಗೆ ಚಿಕಿತ್ಸೆ, 23 ಹಸುಗಳಿಗೆ ಗರ್ಭಧಾರಣಾ ಪರೀೆ ಹಾಗೂ 138 ಕುರಿ ಮತ್ತು ಆಡುಗಳಿಗೆ ಚಿಕಿತ್ಸೆ ನೀಡಲಾಯಿತು. ಅಲ್ಲದೆ, 200ಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು ತಿನ್ನುವ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಅಗತ್ಯ ಔಷಧ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಶು ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಣ್ಣಾರಾವ ಪಾಟೀಲ್, ಜಾನುವಾರುಗಳಿಗೆ ಕಾಲಕಾಲಕ್ಕೆ ಅಗತ್ಯ ಲಸಿಕೆ ಹಾಗೂ ಜಂತುನಾಶಕ ಔಷಧ ನೀಡುವುದು ಅತ್ಯಂತ ಮುಖ್ಯವಾಗಿದ್ದು, ಜಾನುವಾರುಗಳಿಗೆ ಪೌಷ್ಟಿಕ ಆಹಾರ, ಸರಿಯಾದ ಸಮಯಕ್ಕೆ ಮೇವು ಹಾಗೂ ಶುದ್ಧ ನೀರನ್ನು ಒದಗಿಸುವ ಮೂಲಕ ಅವುಗಳ ಆರೋಗ್ಯ ಕಾಪಾಡಬೇಕು ಎಂದು ಹೇಳಿದರು.
ಯಾವುದೇ ಕಾಯಿಲೆ ಲಕ್ಷಣಗಳು ಕಂಡುಬಂದ ತಕ್ಷಣ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ತಾಲೂಕು ಅಧ್ಯ ಸಾಯಬಣ್ಣ ಎ. ಪುರ್ಲೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಾನುವಾರುಗಳು ರೈತರ ಜೀವನಾಡಿಗಳಾಗಿದ್ದು, ರೈತರ ಬದುಕಿನಲ್ಲಿ ಅವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವುಗಳ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ರ್ನಿಲ್ಯ ವಹಿಸಬಾರದು. ಕಾಲಕಾಲಕ್ಕೆ ಪಶುವೈದ್ಯರನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಗರದ ಪಶುವೈದ್ಯಾಧಿಕಾರಿ ಡಾ.ಅಂಬರೀಶ ಬಿರಾದಾರ, ಪಶುವೈದ್ಯಾಧಿಕಾರಿ ಡಾ.ರಾಜು ರಾಠೋಡ, ಹಿರಿಯ ಪಶುವೈದ್ಯಕಿಯ ಪರಿವೀಕರಾದ ಶಂಕರ ಚವ್ಹಾಣ್, ಮೋಸಿನ್ ಅನ್ಸಾರಿ, ರವಿಕುಮಾರ, ಸಹಾಯಕರಾದ ಗೋವಿಂದ, ಅಂಬರೀಷ, ಜಗದೀಶ ರಾಠೋಡ ಹಾಗೂ ಸಿದ್ದಣ್ಣ ಕುಡಲಗಿ ಇತರರಿದ್ದರು.ಶಿಬಿರದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ರೈತರು ಜಾನುವಾರುಗಳನ್ನು ಕರೆತಂದು ಆರೋಗ್ಯ ತಪಾಸಣೆ ಹಾಗೂ ಅಗತ್ಯ ಪಶುವೈದ್ಯಕಿಯ ಸೇವೆಗಳನ್ನು ಪಡೆದುಕೊಂಡರು.