ಗುರುಮಠಕಲ್​ನ ಗಣೇಶ ನಗರದಲ್ಲಿ ಟೌನ್​ಹಾಲ್​ ಕಟ್ಟಡದಲ್ಲಿ ಕೋರ್ಟ್​ ಕಲಾಪ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಎಚ್​.ಜೆ. ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಸಿ.ಎಸ್​.ಪಾಟೀಲ್​ ಇತರರಿದ್ದರು. 
ಯಾದಗಿರಿ

ಗುರುಮಠಕಲ್​ನಲ್ಲಿ ನ್ಯಾಯಾಲಯ ಕಲಾಪಕ್ಕೆ ಸಿದ್ಧತೆ

ಗುರುಮಠಕಲ್​: ಸ್ಥಳಿಯರ ಬಹುದಿನದ ಬೇಡಿಕೆಯಾಗಿರುವ ನ್ಯಾಯಾಲಯ ಸ್ಥಾಪನೆಗೆ ವೇಗ ದೊರೆತಿದ್ದು, ಗಣೇಶ ನಗರದಲ್ಲಿರುವ ಟೌನ್​ಹಾಲ್​ ಕಟ್ಟಡವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಎಚ್​.ಜೆ. ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಸ್ಥಳಿಯವಾಗಿ ನಡೆಯುವಂತೆ ಕಲಾಪ ಆರಂಭಿಸಲು ಅಗತ್ಯವಿರುವ ಕಟ್ಟಡ ಮತ್ತು ಸ್ಥಳಾವಕಾಶದ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನ್ಯಾಯಾಲಯ ಕಾರ್ಯಾರಂಭಕ್ಕೆ ಬೇಕಾದ ಸೌಲಭ್ಯ ಮತ್ತು ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿಡಬ್ಲುಡಿ ಎಇಇ ಪರಶುರಾಮ, ಯಾದಗಿರಿ ವಕೀಲರ ಸಂದ ಜಿಲ್ಲಾಧ್ಯಕ್ಷ ಸಿ.ಎಸ್​. ಪಾಟೀಲ್​, ಕಾರ್ಯದರ್ಶಿ ಗೋವಿಂದ ಜಾಧವ್​ ಇತರರಿದ್ದರು. ಹೈಕೋರ್ಟ್​ ಆದೇಶದಂತೆ ಪ್ರತಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಗುರುಮಠಕಲ್​ನಲ್ಲಿ ಕಲಾಪ ಆರಂಭವಾದರೆ 40 ಕಿಮೀ ದೂರದ ಯಾದಗಿರಿಗೆ ತೆರಳುವುದು ತಪ್ಪಲಿದೆ.