ಯಾದಗಿರಿ: ಪಠ್ಯದೊಂದಿಗೆ ಕ್ರೀಡೆಗಳಲ್ಲೂ ಭಾಗವಹಿಸುವ ಮೂಲಕ ಮಕ್ಕಳು ಉತ್ತಮ ಆರೋಗ್ಯ ಹೊಂದಬೇಕು ಎಂದು ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅನೀಲಕುಮಾರ ನಾಯಕ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ 14,17ರ ವಯೋಮಿತಿಯ ಬಾಲಕ ಮತ್ತು ಬಾಲಕಿಯ ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ದೇಸಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆಯಿಂದ ಭಾಗಹಿಸಬೇಕು. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತು ನೆನೆಪಿನಲ್ಲಿಟ್ಟುಕೊಂಡು ಆಟಗಳನ್ನು ಆಡಬೇಕೆಂದರು. ಪ್ರೌಢಶಾಲಾ ಸಹ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಸರ್ಕಾರಿ ವಿವಿಧ ಟಕಗಳ ಪದಾಧಿಕಾರಿಗಳಾದ ಲಕ್ಷ್ಮೀಕಾಂತರೆಡ್ಡಿ, ಶರಣಗೌಡ, ಭೀಮರಾಯ ಬೊಮ್ಮನ, ಆಂಜನೇಯ, ಆದೆಪ್ಪ ಬಾಗ್ಲಿ, ಶಂಕ್ರಪ್ಪ ಕೋಮಾರ, ಉಮಾಮಹೇಶ್ವರಿ ಸೇರಿದಂತೆಯೇ ಇತರರಿದ್ದರು. ದೈಹಿಕ ಶಿಕ್ಷಕರ ಸಂ ಗ್ರೇಡ್ 1 ತಾಲೂಕು ಅಧ್ಯಕ್ಷ ಮೌನೇಶ ಗೋನಾಲ ಸ್ವಾಗತಿಸಿದರು, ಶಿಕ್ಷಕ ತುಳಜಪ್ಪ ಶಹಾಪುರಕರ್ ವಂದಿಸಿದರು. ಈ ವೇಳೆ 280 ಮಕ್ಕಳು ಕಬ್ಬಡಿ, ಕೋಕೋ, ಥ್ರೋಬಾಲ್, ರನ್ನಿಂಗ್, ಉತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಆಟಗಳಲ್ಲಿ ಭಾಗವಹಿಸಿದ್ದರು.