ಯಾದಗಿರಿ: ಬ್ರಿಟಿಷರ ಗುಲಾಮಗಿರಿಯನ್ನು ಧಿಕ್ಕರಿಸಿ, ತಮ್ಮ ಸಮುದಾಯದ ಹಕ್ಕುಗಳಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಬಿರ್ಸಾ ಮುಂಡಾ ಅವರ ಜೀವನ ಕೇವಲ ಚರಿತ್ರೆಯಲ್ಲ, ನಮಗೆಲ್ಲರಿಗೂ ಸ್ಫೂರ್ತಿ ಎಂದು ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಜಿಲ್ಲಾಧ್ಯಕ್ಷ ಚಂದಪ್ಪ ನಾಯಕ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಬಿರ್ಸಾ ಮುಂಡಾ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಗವಾನ್ ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದ ಪ್ರೀತಿಯ "ಧರ್ತಿ ಆಬಾ" ಭೂಮಿಯ ತಂದೆ ಎಂದೇ ಖ್ಯಾತರಾಗಿದ್ದರು. ದೇಶಕ್ಕಾಗಿ ಬುಡಕಟ್ಟು ನಾಯಕರು ನೀಡಿದ ಅಪ್ರತಿಮ ಕೊಡುಗೆ ಗುರುತಿಸಿ, ಕೇಂದ್ರ ಸರ್ಕಾರ 2021ರಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ ನ.15ರಂದು ಜನಜಾತೀಯ ಗೌರವ ದಿವಸ್ ಎಂದು ಆಚರಿಸಲು ಅಧಿಕೃತವಾಗಿ ಘೋಷಿಸಿದೆ. ಇದರಿಂದ ನಿಜ ಇತಿಹಾಸಕ್ಕೆ ಬಿಜೆಪಿ ಸರ್ಕಾರ ನ್ಯಾಯ ಒದಗಿಸಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷಿ$್ಮಪುತ್ರ, ಪ್ರಮುಖರಾದ ಶ್ರೀಧರ ಸಾಹುಕಾರ, ಮಲ್ಲು ಕೋಲಿವಾಡ, ಶರಣುಗೌಡ ಕ್ಯಾತನಾಳ, ಸಲ್ಲು ದಂಡಿನ, ಮಲ್ಲಿಕಾರ್ಜುನ ಜೊಲ್ಲಪ್ಪನವರ್, ರಾಮಣ್ಣ, ಪಕೀರಪ್ಪ ಪೂಜಾರಿ, ತಾಯಪ್ಪ ದೊರಿ, ವಿರೇಶ್, ಯಲ್ಲಪ್ಪ ಮಾಲೀಕೇರಿ, ಸ್ವಾಮಿದೇವನ್ ದಾಸನಕೇರಿ, ಮೌನೇಶ ತುಂಬಳ, ಮಲ್ಲು ಸ್ವಾಮಿ, ವೆಂಕಟೇಶ, ಬಸವರಾಜ ಇದ್ದರು.