ಯಾದಗಿರಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಗೆ ಬೆಜ್ಜಗಿನ ಉಡುಪಾದ ರೇನ್‌ಕೋಟ್ ಧರಿಸಿ ಶಾಲೆಗೆ ಹೊರಟ ಮಕ್ಕಳು.
ಯಾದಗಿರಿ: ಬಂಗಾಲಕೊಲ್ಲಿಯಿAದ ಆರಂಭವಾದ ಮೇಲ್‌ಮೈ ಸೂಳಿಗಾಳಿ ತಮಿಳುನಾಡು ರಾಜ್ಯಕ್ಕೆ ಪ್ರವೇಶ ಪಡೆದ ಹಿನ್ನೆಲೆಯಲ್ಲಿ ಅದರ ಪರಿಣಾಮ ರಾಜ್ಯದ ಹಲವಡೆ ಉಂಟಾಗಿದ್ದು, ಗುಡ್ಡಬೆಟ್ಟಗಳ ಜಿಲ್ಲೆ ಈಗ ತಂಪು ಜಿಲ್ಲೆ ಕೊಡುಗಿನಲ್ಲಿರುವಂತ ವಾತವರಣ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಹಿಡಿದು, ಬಿಟ್ಟು ಬರುತ್ತಿರುವ ಹಗುರದಿಂದ ಸಾಧಾರಣ ತುಂತುರು ಮಳೆ ಮತ್ತು ಚಳಿಗಾಳದ ಅತಿ ತಂಪು ಗಾಳಿಯಿಂದ ಗಿರಿಜಿಲ್ಲೆಯ ಅಸಂಖ್ಯಾತ ಜನರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.
ಚಳಿಗಾಲ ಆರಂಭಗೊAಡು ಹೆಚ್ಚು ಕಡಿಮೆ ಒಂದು ತಿಂಗಳ ಸಮೀಪಿಸುತ್ತಿದ್ದು, ಈ ನಡುವೆ ಅಕಾಲಿಕ ಮಳೆ ಆಗಾಗ ಬರುತ್ತಿದ್ದು, ಮಳೆಯಿಂದ ಚಳಿಗೆ ವಗ್ಗಿಕೊಳ್ಳುವ ದೇಹದಲ್ಲಿ ತಂಪು ಹೆಚ್ಚಾಗಿ ನೆಗಡಿ, ಕೆಮ್ಮು ಮತ್ತು ಜ್ವರ ಸಾಮಾನ್ಯವಾಗಿ ಬಹುತೇಕರಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಆಸ್ಪತ್ರೆಗೆ ಹೋದರೂ ಇದೇ ರೋಗ ಪೇಸೆಂಟ್‌ಗಳೇ ಕಾಣಸಿಗುತ್ತಿದ್ದಾರೆ.
- ಅತಿ ತಂಪಿನಿAದಾಗಿ ಅನಾರೋಗ್ಯ ಸಮಸ್ಯೆ ಹೆಚ್ಚಳ
- ನಾಳೆ ಸಂಜೆವರೆಗೂ ಸೂಳಿಗಾಳಿ ಎಫೆಕ್ಟ್ನಿಂದ ತುಂತುರು ಮಳೆ
- ಕೆಮ್ಮು ಮತ್ತು ಜ್ವರ ಬಹುತೇಕರಲ್ಲಿ ಕಾಣಿಸಿಕೊಂಡಿದ್ದ
ಈ ಸೂಳಿಗಾಳಿಗೆ ಮೋಡಗಳು ಕಪ್ಪಾಗಿ ತಣ್ಣನೆ ಗಾಳಿ ಬೀಸುವ ಮೂಲಕ ಆಗಾಗ ಮಳೆ ಸುರಿಯುತ್ತಿದ್ದು, ಇದು ನ.೬ರವರೆಗೂ ಮುಂದುವರೆಯಲಿದೆ. ನಗರ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಇಡೋ ದಿನ ಮೈಕೊರೆಯುವ ಚಳಿಗಾಳಿಯೊಂದಿಗೆ ಬರುತ್ತಿರುವ ಮಳೆಯಿಂದಾಗಿ ಜನರು ಹೊರಗಡೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಚ್ಚನೆ ಉಡುಪುಗಳನ್ನು ಧರಿಸಿಯೇ ದೈನಂದಿನ ಕೆಲಸ-ಕಾರ್ಯಗಳಿಗೆ ಹೋಗಿ ಬಂದು ಮಾಡುತ್ತಿದ್ದಾರೆ. ಹವಾಮಾನ ಬದಲಾಗುವಾಗ ಜನರ ಆರೋಗ್ಯದ ಮೇಲೂ ವ್ಯತಿರಕ್ತ ಪರಿಣಾಮದಿಂದ ವೈರಲ್ ಇನ್‌ಫೇಕ್ಸ್ನ್ ಬೀರುವುದರಿಂದ ಹೆಚ್ಚಾಗಿ ಮಕ್ಕಳು, ವೃದ್ಧರು ಚಳಿಜ್ವರ, ನೆಗಡಿ, ಮೈಕೈನೋವು ಮತ್ತು ಕೆಮ್ಮಿನಿಂದ ಬಳಲುವಂತಿದ್ದಾರೆ.
ಅನೇಕರ ದೇಹದಲ್ಲಿ ಜಮಾಗೊಂಡಿರುವ ಕಫ್ ಈ ಚಳಿಗೆ ಕೆಮ್ಮಿಸುವ ಮೂಲಕ ಹೊರಬರುತ್ತಿದ್ದು, ಇದರಿಂದ ಅತಿಯಾದ ಸೂಸ್ತು ಮತ್ತು ದೇಹದ ನೋವಿನಿಂದ ಕೂಡಿ ಹಾಸಿಗೆಯಿಂದ ಏಳದಂತಹ ಸ್ಥಿತಿ ಕೂಡ ಅನೇಕರು ಅನುಭವಿಸುತ್ತಿದ್ದಾರೆ.
"
ಈ ಸೂಳಿಗಾಳಿಯ ಎಫೇಕ್ಟ್ ಮತ್ತು ಚಳಿಗಾಲದ ತಂಪು ಗಾಳಿಯಿಂದ ಸಹಜವಾಗಿ ಅನೇಕರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ವೇಳೆ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಸೊಳ್ಳೆ ಬರಂದತೆ ಮನೆ, ಅಂಗಳ ಮತ್ತು ಅಕ್ಕಪಕ್ಕದ ಜಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೊರಗಿನ ಪದಾರ್ಥ ಈ ವೇಳೆ ತಿನ್ನಬಾರದು. ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಕಡೆ ಗಮನ ವಹಿಸಬೇಕು.
| ಡಾ.ಮಹೇಶ ಬಿರಾದಾರ ಡಿಎಚ್‌ಒ ಯಾದಗಿರಿಹವಮಾನ ಇಲಾಖೆ
ಪ್ರಕಾರ ಬಂಗಾಲಕೊಲ್ಲಿಯಲ್ಲಿ ಉಂಟಾದ ಸೂಳಿಗಾಳಿ ನೇರವಾಗಿ ತಮಿಳುನಾಡು ಪ್ರವೇಶಿಸಿದ್ದು, ಅದರ ಕೆಟ್ಟ ಪರಿಣಾಮ ನಮ್ಮ ಭಾಗದಲ್ಲಿ ಆಗಿ, ೩-೪ ದಿನಗಳವರೆಗೆ ಹಗುರದಿಂದ ಸಾಧಾರಣವಾದ ಮಳೆ ಬರುತ್ತದೆ. ಇದು ಮಳೆಗಾಲ ಮಳೆ ಅಲ್ಲ. ಈ ವೇಳೆ ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ.
| ರತೇಂದ್ರನಾಥ ಸೂಗೂರುಜಂಟಿ ನಿರ್ದೇಶಕರು ಕೃಷಿ ಇಲಾಖೆ ಯಾದಗಿರಿ