ಸುರಪುರ ನಗರದ ರಂಗಂಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡ ಸಾಂಸತಿಕ ಸೌರಭ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆಗಳಾದ ಕಾವೇರಿ, ವಿದ್ಯಾ ಅವರನ್ನು ಸನ್ಮಾನಿಸಲಾಯಿತು. ಸೂಗೂರೇಶ ವಾರದ, ಶರಣಬಸಪ್ಪ ಯಾಳವಾರ, ರಾಜಶೇಖರ ಗೆಜ್ಜಿ, ಹೊನ್ನೊಜಿರಾವ್​ ಹಳಿಜೋಳ, ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಬಸವರಾಜ ಪಂಜಗಲ್​, ಮೌನೇಶ ನಾಲವಾರ ಇತರರಿದ್ದರು. 
ಯಾದಗಿರಿ

ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಸೂಗೂರೇಶ ವಾರದ ಹೇಳಿಕೆ
  • ರಂಗಂಪೇಟೆಯಲ್ಲಿ ಸಾಂಸ್ಕೃತಿಕ ಸೌರಭ
ಸುರಪುರ: ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ಡೋರವಾಗಿ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂದ ಅಧ್ಯಕ್ಷ ಸೂಗೂರೇಶ ವಾರದ ಹೇಳಿದರು.
ನಗರದ ರಂಗಂಪೇಟೆಯ ಸಹಜಾನಂದ ಸರಸ್ವತಿ ಮಠದಲ್ಲಿ ಭಾನುವಾರ ಸಗರನಾಡು ಕಲಾ ವೇದಿಕೆ ರುಕ್ಮಾಪೂರ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರುನಿಂದ ಹಮ್ಮಿಕೊಂಡ ಸಾಂಸತಿಕ ಸೌರಭ ಕಾರ್ಯಕ್ರಮ ಮತ್ತು 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದದರು.
ಸಾಹಿತ್ಯ ಮತ್ತು ಸಾಂಸತಿಕ ಪರಂಪರೆಯ ಪ್ರತಿಕವಾಗಿರುವ ಇಂತಹ ಅದ್ಭುತ ಸಂಗೀತ ಕಾರ್ಯಕ್ರಮ ಆಯೋಜಿಸಿರುವ ರಾಜಶೇಖರ ಗೆಜ್ಜಿ ಕಾರ್ಯ ಶ್ಲಾನೀಯ. ಸಂಗೀತ ಪ್ರೇಮಿಗಳು ಇಂತಹ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳಬೇಕು ಎಂದರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸುರಪುರ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಸಂಗೀತ ಗಾನ ಗಂಧರ್ವರ ವಿದ್ಯೆಯಾಗಿದೆ. ಧ್ವನಿ ಮತ್ತು ಮೌನವನ್ನು ಲಯ, ಮಧುರ ಹಾಗೂ ಸಾಮರಸ್ಯದ ಮೂಲಕ ಅರ್ಥಪೂರ್ಣವಾಗಿ ಸಂಯೋಜಿಸುವ ಕಲೆ ಇದಾಗಿದೆ. ಮೌನವನ್ನು ರಾಗದ ಮೂಲಕ ವ್ಯವಸ್ಥಿತವಾಗಿ ಜೋಡಿಸಿ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಈ ಕಲೆ ಕೇಳುಗನ ಮನಸ್ಸಿಗೆ ಅಪಾರ ಆನಂದ ನೀಡುತ್ತದೆ ಎಂದರು. ಶಿಕ್ಷಕ, ಸಾಹಿತಿ ಹೆಚ್​.ವೈ.ರಾಠೋಡ್​, ಪಿಐ ಉಮೇಶ್​ ಎಂ.ನಾಯಕ ಮಾತನಾಡಿದರು.
ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ಅಧ್ಯಕ್ಷತೆ ವಹಿಸಿದ್ದರು. ಸಾಧಕಾದ ನಿವೃತ್ತ ಮುಖ್ಯ ಶಿಕ್ಷಕ ಮುದ್ದಪ್ಪ ಅಪ್ಪಾಗೋಳ ಮತ್ತು ಪಿಐ ಉಮೇಶ್​ ಎಂ.ನಾಯಕ ಅವರಿಗೆ ಸೇವಾ ಪ್ರದಿಪಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆಗಳಾದ ಕಾವೇರಿ, ವಿದ್ಯಾ ದೇವಿಂದ್ರಪ್ಪ ಯಾಳಗಿ ಅವರಿಗೆ ವಿಶೇಷ ಸನ್ಮಾನಿಸಲಾಯಿತು. ಹೊನ್ನೊಜಿರಾವ್​ ಹಳಿಜೋಳ, ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಬಸವರಾಜ ಪಂಜಗಲ್​, ಮೌನೇಶ ನಾಲವಾರ, ರಾಜೇಂದ್ರ ಸಜ್ಜನ್​ ವೇದಿಕೆಯಲ್ಲಿದ್ದರು. ರಮೇಶ ಕುಲಕರ್ಣಿ ನಿರೂಪಿಸಿದರು. ಜಗದೀಶ್​ ಪತ್ತಾರ್​ ಸ್ವಾಗತಿಸಿದರು. ಇಸಾಕಸಾಬ್​ ವಂದಿಸಿದರು.
ಮನಸೊರೆಗೊಂಡ ಗಾಯನ ಪ್ರಸ್ತುತಿ
ರಾಜ್ಯದ ಪ್ರಸಿದ್ಧ ಕಲಾ ತಂಡಗಳಿಂದ ಜರುಗಿದ ಸಾಂಸತಿಕ ಸೌರಭ ಸಂಗೀತ ರಸದೌತನ ನೆರದಿದ್ದ ಪ್ರೇಕ್ಷಕರ ಮನಸೊರೆಗೊಂಡಿತು. ಬಸವರಾಜ ಬಂಟನೂರ ಕೆಂಭಾವಿ (ಆಕಾಶವಾಣಿ ಕಲಾವಿದರು), ದೀಪಕಸಿಂಗ್​ ಹಜೇರಿ ತಾಳಿಕೋಟೆ (ಸುಗಮ ಸಂಗೀತ), ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ (ತತ್ವ ಪದಗಳು), ಬೂದಯ್ಯ ಹಿರೇಮಠ ಶಹಾಪೂರ (ಜಾನಪದ ಗೀತೆಗಳು), ಮಲ್ಲಯ್ಯ ಹಿರೇಮಠ ಶಹಾಪೂರ (ಭಾವಗೀತೆಗಳು), ಉಮೇಶ ಯಾದವ ರಂಗಂಪೇಟೆ (ವಚನ ಗಾಯನ) ಈ ಎಲ್ಲಾ ತಂಡಗಳಿಗೆ ಈಶ್ವರ ಬಡಗೇರ್​, ಸುರೇಶ ಅಂಬುರೆ ಮತ್ತು ಮಹಾಂತೇಶ ಶಹಾಪೂರಕರ್​ ಸಂಗೀತ, ತಬಲಾ ಸಾಥ್​ ನೀಡುವ ಮೂಲಕ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು.