ಕೊಡೇಕಲ್‌ನ ಪ್ಯಾಟಿ ವಲಯದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಯಾತ್ರಿ ನಿವಾಸ ಕಟ್ಟಡ. 
ಯಾದಗಿರಿ

ಕೊಡೇಕಲ್ ಕಾಲಜ್ಞಾನಿ ಭಕ್ತರಿಗಿಲ್ಲ ಸೌಕರ್ಯ

ಕೊಡೇಕಲ್: ಕಾಲಜ್ಞಾನದ ವಚನಗಳ ಮೂಲಕ ಮನೆ ಮಾತಾಗಿರುವ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಶ್ರೀ ಬಸವೇಶ್ವರ ದರ್ಶನಕ್ಕೆ ಅಸಖ್ಯಾಂತ ಭಕ್ತರು ಹೊಂದಿದ್ದರೂ ಕೂಡ ಅಗತ್ಯಕ್ಕೆ ತಕ್ಕಂತೆ ಮೂಲಸೌಲಭ್ಯಗಳ ಕೊರತೆ ಕಾಡಲಾರಂಭಿಸಿದೆ. ಇವುಗಳ ಮಧ್ಯೆಯೇ ಜಾತ್ರೆ ಸೇರಿ ಹಲವು ಧಾರ್ಮಿಕ ಕರ‍್ಯಕ್ರಮಗಳು ಬುಧವಾರದಿಂಚ ಚಾಲನೆ ದೊರೆಯಲಿವೆ.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಈ ಎರಡು ದೇವಸ್ಥಾನ ಇಂದು ಹಲವು ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವುದು ಮಾತ್ರ ಸುಳ್ಳಲ್ಲ. ವರ್ಷದಲ್ಲಿ ಎರಡು ಬಾರಿ ನಡೆಯುವ ಈ ಜಾತ್ರೋತ್ಸವದಲ್ಲಿ ಸೇರಿ ವರ್ಷವಿಡಿ ವಿವಿಧ ಧಾರ್ಮಿಕ ಕರ‍್ಯಕ್ರಮಗಳ ಮೂಲಕ ಅಸಖ್ಯಾಂತ ಭಕ್ತರನ್ನು ಹೊಂದಿರುವ ಭಾವೈಕ್ಯತೆಯ ತಾಣವಾಗಿದೆ.
ಆದರೆ ಬಸವೇಶ್ವರ ದೇವಸ್ಥಾನಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಭಕ್ತರು ಪ್ರತಿ ವರ್ಷ ತೊಂದರೆ ಅನುಭವಸುವಂತಾಗಿದೆ. ಭಕ್ತರಿಗೆ ವಸತಿ, ಶುದ್ಧವಾದ ಕುಡಿಯುವ ನೀರು, ಸ್ನಾನಗೃಹ, ಚೌಚಗೃಹ ಸೇರಿ ಹತ್ತು ಹಲವು ಸೌಲಭ್ಯಗಳಿಂದ ಈ ದೇವಸ್ಥಾನ ವಂಚಿತವಾಗಿದೆ.
  • ಬಸವೇಶ್ವರ ಜಾತ್ರೆಗಿಂದು ಚಾಲನೆ
  • ಗುರುವಾರ ಜೋಡು ಪಲ್ಲಕ್ಕಿ ಉತ್ಸವ
  • ಮರಿಚೀಕೆಯಾಗಿ ಉಳಿದ ಮೂಲಸೌಲಭ್
ದತ್ತಿ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ತಾಲೂಕು ದಂಡಾಧಿಕಾರಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದಾರೆ ಆದರೂ ಕೂಡ ದೇವಸ್ಥಾನಗಳಲ್ಲಿ ಅಭಿವೃದ್ದಿ ಕರ‍್ಯ ಮಾತ್ರ ಮರಿಚೀಕೆಯಾಗಿ ಉಳಿಯುವ ಮೂಲಕ ಭಕ್ತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ವರ್ಷ ನಡೆಯವ ಎರಡು ಜಾತ್ರೆ, ಜಾತ್ರೆಗಳ ಹರಾಜು, ಮಹಾಶಿವರಾತ್ರಿ, ಯುಗಾದಿ ಮತ್ತು ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆ,ಹರಕೆ ತೀರಿಸಲು ಬರುವ ಭಕ್ತರು ನೀಡುವ ದೇಣಿಗೆ ಸೇರಿ ಲಕ್ಷಗಟ್ಟಲೇ ಹಣ ಹುಂಡಿ ಪೆಟ್ಟಿಗೆಗೆ ಬಂದು ಸಂದಾಯವಾಗುತ್ತಿದೆ ಆದರೂ ಕೂಡ ಹುಂಡಿ ಹಣ ಎಣಿಸಿ ಬ್ಯಾಂಕ್ ಖಾತೆಗೆ ಭರ್ತಿ ಮಾಡುವ ಅಧಿಕಾರಿಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಮಾತ್ರ ಸಂಪೂರ್ಣ ವಿಫಲರಾಗಿದ್ದಾರೆ.
ಪ್ರತಿ ವರ್ಷ ದವನ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆಯಂದು ಜಾತ್ರೆ ಜರುಗುತ್ತದೆ. ಅದರಂತೆ ಗೌರಿ ಹುಣ್ಣಿಮೆ ದಿನವಾದ ಬುಧವಾರ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರಕಲಿದ್ದು ೫ ದಿನಗಳ ಕಾಲ ನಡೆಯುವ ಜಾತ್ರೆಗೆ ಈಗಾಗಲೇ ಗ್ರಾಮ ನವ ವಧುವಿನಂತೆ ಸಿಂಗಾರಗೊAಡಿದ್ದು, ಜಾತ್ರೆಗೆ ಹಲವು ಅಂಗಡಿಗಳು ಬಂದಿದ್ದು ಭಕ್ತರು ಕೂಡ ಕಾಲಜ್ಞಾನಿಯತ್ತ ಮುಖ ಮಾಡಿದ್ದಾರೆ. ಆದರೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಸೌಲಭ್ಯ ದೊರಕದಿರುವುದು ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ ವರ್ಷ ಪೂಜ್ಯರ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನಾಡಕಚೇರಿ ಎದುರು ಧರಣಿ ಮಾಡಿದರೂ ಕೂಡ ಈವರೆಗೆ ಯಾವುದೇ ಪ್ರಯೋಜನ ಆಗದಿರುವುದು ದೊಡ್ಡ ದುರಂತರವೇ ಸರಿ. ಹೀಗಾಗಿ ಸಹಜವಾಗಿ ಸ್ಥಳೀಯರು ಮತ್ತು ಭಕ್ತರನ್ನು ಕೆರಳಿಸುವಂತೆ ಮಾಡಿದೆ.
ಹುಣ್ಣಿಮೆ ದಿನವಾದ ಬುಧವಾರ ಬೆಳಗ್ಗೆ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಅವರ ಸಾನ್ನಿಧ್ಯದಲ್ಲಿ ಪಂಚಾAಗ ಶ್ರವಣ, ನಂತರ ನಗಾರಿ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ರಾತ್ರಿ ಪಲ್ಲಕ್ಕಿಗಳಿಗೆ ಕಳಶಾರೋಹಣ, ಗುರುವಾರ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ. ಬಾರಾಬಲೂತಿ ವತನದಾರರು ಮತ್ತು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಜಾತ್ರೆ ನಡೆಯಲಿದ್ದು, ಧುಳಗಾಯಿ, ಪಟ್ಟದ ಕುದುರೆ ಕುಣಿತ, ಸಕ್ಕರೆ ಹಂಚುವುದು ಸೇರಿ ವಿವಿಧ ಧಾರ್ಮಿಕ ಕರ‍್ಯಕ್ರಮ ಜರುಗಲಿವೆ.

ಅರ್ಧಕ್ಕೆ ನಿಂತ ಯಾತ್ರಿನಿವಾಸ

ಗ್ರಾಮದ ಪ್ಯಾಟಿ ವಲಯದಲ್ಲಿರುವ ಕಾಲಜ್ಞಾನ ಬರೆದ ದೇವಸ್ಥಾನ ಆವಣರದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಭಕ್ತರಿಗಾಗಿ ನಿರ್ಮಿಸುತ್ತಿರುವ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾಗಿದೆ ದತ್ತಿ ಇಲಾಖೆ. ಭಕ್ತರು ಉಳಿದುಕೊಳ್ಳಬೇಕಾಗಿದ್ದ ಕಟ್ಟಡ ಇಂದು ಹಾಳಾಗಿ ಹೋಗುತ್ತಿರುವುದು ಒಂದೆಡೆಯಾದರೆ ಇನ್ನೂ ಕೆಟ್ಟು ಹೋಗಿ ವರ್ಷಗಳೇ ಕಳೆದರು ಇದುವರೆಗೆ ದುರಸ್ತಿಯಾಗದೆ ಹಾಗೆ ಉಳಿದಿರುವ ಆರ್‌ಒ ಪ್ಲಾಂಟ್, ಶೌಚಗೃಹ ಇವುಗಳ ದುರಸ್ತಿ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಭಕ್ತರಿಕೆ ದೊಡ್ಡ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಅಸಖ್ಯಾAತ ಭಕ್ತರನ್ನು ಹೊಂದಿರುವ ಕೊಡೇಕಲ್ ಬಸವಣ್ಣನಿಗೆ ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುತ್ತದೆ ವಾರ್ಷಿಕವಾಗಿ ಲಕ್ಷಾನುಗಟ್ಟಲೆ ಕಾಣಿಕೆ ಸಂಗ್ರವಾದರೂ ಮೂಲಸೌಕರ್ಯದಿಂದ ಇನ್ನೂ ವಂಚಿತವಾಗಿದೆ. ಈ ಕುರಿತು ತಾಲೂಕು ಮತ್ತು ಜಿಲ್ಲಾಡಳಿತ ಗಮನ ಹರಿಸಬೇಕು.

| ರಮೇಶ ಬಿರಾದಾರ ಕರವೇ ತಾಲೂಕಾಧ್ಯಕ್ಷ