ರಾಜ್ಯೋತ್ಸವ ನಿಮಿತ್ತ ಯಾದಗಿರಿಯಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಟಕದಿಂದ 500 ಅಡಿ ಉದ್ದದ ಕನ್ನಡ ಬಾವುಟದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಶಾಲಾ ಮಕ್ಕಳು, ಗಣ್ಯರು ಪಾಲ್ಗೊಂಡಿದ್ದರು. 
ಯಾದಗಿರಿ

500 ಅಡಿ ಕನ್ನಡ ಬಾವುಟದ ಭವ್ಯ ಮೆರವಣಿಗೆ

ಯಾದಗಿರಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನೇತಾಜಿ ಸುಭಾಶ್ಚಂದ್ರ ಬೋಸ್​ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಆಯೋಜಿಸಿದ್ದ 500 ಅಡಿ ಉದ್ದದ ಕನ್ನಡ ಬಾವುಟದ ಅದ್ದೂರಿ ಮೆರವಣಿಗೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಚಾಲನೆ ನೀಡಿದರು. ಸರ್ಕಾರಿ ಪದವಿ ಕಾಲೇಜು, ಆರ್​ಟಿಒ ಕಚೇರಿ, ಡಾನ್​ ಬಾಸ್ಕೊ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣವರೆಗೆ ನಡೆಯಿತು. ಶಾಲಾ&ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಭಾಗಿಯಾಗಿ ಭವ್ಯ ಮೆರವಣಿಗೆಗೆ ಸಾಯಾದರು. ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ.ಜಲ್ಲಪ್ಪನೋರ್​ ರಾಮಸಮುದ್ರ ನೇತೃತ್ವದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ, ಡಿಸಿ ರಾಹುಲ್​ ಪಾಂಡ್ವೆ, ಎಸ್​ಪಿ ಪೃಥ್ವಿಕ್​ ಶಂಕರ್​, ಡಿಡಿಪಿಐ ಚನ್ನಬಸಪ್ಪ ಮುಧೋಳ, ಪ್ರಮುಖರಾದ ದೇವೇಂದ್ರನಾಥ ನಾದ, ಲಲಿತಾ ಅನಪುರ, ನಾಗರತ್ನ ಕುಪ್ಪಿ, ಮಲ್ಲಣ್ಣಗೌಡ ಹಳಿಮನಿ ಕೌಳೂರು, ಮರೆಪ್ಪ ನಾಯಕ ಮೊಗದಂಪುರ, ಸಿದ್ದಲಿಂಗರಡ್ಡಿ ಉಳ್ಳೆಸುಗೂರು, ಹಣಮಂತ ಇಟಗಿ, ಶ್ರೀಧರ ಸಾಹುಕಾರ, ಶಿವರಾಜ ದಾಸನಕೇರಿ, ಸುನಿತಾ ಚವ್ಹಾಣ್​, ಕಾಶಪ್ಪ ಹೆಗ್ಗಣಗೇರಾ, ಸಾಬು ಹೋರುಂಚಾ, ಸೈದಪ್ಪ ಕೂಲುರಕರ್​, ಅಶೋಕ ಐಕೂರ, ಶರಣಗೌಡ ಅಲ್ಲಿಪುರ, ಬೀರೇಶ ಚಿರತೆನೋರ, ಗಿರೀಶಕುಮಾರ ಯಡ್ಡಳ್ಳಿ, ರುದ್ರಾಂಬಿಕಾ ಆರ್​.ಪಾಟೀಲ್​, ಬಸ್ಸುಗೌಡ ಚಟ್ನಳ್ಳಿ, ಮಂಜುನಾಥ ಬಾಚವಾರ ಇತರರಿದ್ದರು. ಇದಕ್ಕೂ ಮುನ್ನ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಪೂಜೆ ಸಲ್ಲಿಸಿದರು.