ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದ ಎಸ್‌ಸಿ ವಾರ್ಡ್ನ ನಿವಾಸಿಗಳು ಕುಡಿಯುವ ನೀರಿಗಾಗಿ ಬುಧವಾರ ಪ್ರತಿಭಟನೆ ನಡೆಸಿದರು. ದುರ್ಗಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಬಸವರಾಜ ತಳಗೇರಿ, ಚನ್ನಬಸವ ತಳಗೇರಿ, ಪ್ರವೀಣ ತಳಗೇರಿ, ಹುಲಗಮ್ಮ ತಳಗೇರಿ, ಲಕ್ಷ್ಮೀ, ರಂಗಮ್ಮ, ಶರಣಮ್ಮ, ಹಣಮಂತಿ ಇತರರಿದ್ದರು.
- ಅರಳಹಳ್ಳಿ ಗ್ರಾಮಸ್ಥರ ಎಚ್ಚರಿಕೆ
- ಜೆಜೆಎಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯ
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಆರೋಪಿಸಿ ತಾಲೂಕಿನ ಅರಳಹಳ್ಳಿ ಗ್ರಾಮದ ಎಸ್‌ಸಿ ವಾರ್ಡ್ ಮತ್ತು ಕ್ರಾಸ್‌ನ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡ ದುರ್ಗಪ್ಪ ಪೂಜಾರಿ ಮಾತನಾಡಿ, ದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅರಳಹಳ್ಳಿ ಗ್ರಾಮದ ಎಸ್‌ಸಿ ವಾರ್ಡ್ನಲ್ಲಿರುವ ಏಕೈಕ ಕೊಳವೆ ಬಾವಿ ಕೆಟ್ಟುಹೋಗಿದೆ. ಕ್ರಾಸ್‌ನಲ್ಲಿಯೂ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ ಎಂದು ದೂರಿದರು.
ಕಳೆದ ಎರಡು ತಿಂಗಳಿAದ ಈ ಪರಿಸ್ಥಿತಿ ಇದ್ದು, ಈ ಬಗ್ಗೆ ಪಿಡಿಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಿತ್ಯ ಎರಡು ಕಿಮೀ ದೂರವಿರುವ ನದಿಯಿಂದ ನೀರು ತರುವಂತಾಗಿದೆ. ಕಾರಣ ತಕ್ಷಣ ನೀರು ಪೂರೈಕೆಗೆ ಕರಮ ಕೈಗೊಳ್ಳಬೇಕು. ಕೊಳವೆಬಾವಿ ದುರಸ್ತಿ ಮಾಡುವುದರ ಜತೆಗೆ ಎಸ್‌ಸಿ ವಾರ್ಡ್ ಮತ್ತು ಕ್ರಾಸ್‌ನಲ್ಲಿ ತಲಾ ಒಂದು ಹೊಸ ಕೊಳವೆಬಾವಿ ಹಾಕಿಸಬೇಕು. ಜೆಜೆಎಂ ಕಾಮಗಾರಿ ಶೀಘ್ರ ಕೈಗೊಳ್ಳಬೇಕು. ನಿರ್ಲಕ್ಷ÷್ಯ ವಹಿಸಿದ್ದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮಲ್ಲಪ್ಪ ಪೂಜಾರಿ, ಬಸವರಾಜ ತಳಗೇರಿ, ಚನ್ನಬಸವ ತಳಗೇರಿ, ಪ್ರವೀಣ ತಳಗೇರಿ, ಹುಲಗಮ್ಮ ತಳಗೇರಿ, ಲಕ್ಷ್ಮೀ, ರಂಗಮ್ಮ, ಶರಣಮ್ಮ, ಹಣಮಂತಿ, ನಂದಮ್ಮ, ಬಸಪ್ಪ, ಆದಪ್ಪ, ಮೌನೇಶ, ಹೊಳೆಪ್ಪ, ಕೆಂಚಪ್ಪ ಇತರರಿದ್ದರು.