ಕಕ್ಕೇರಾ ಪಟ್ಟಣದ ಮೇಲ್ದಜೇಗೇರಿದ ಉಪ ಅಂಚೆ ಕಚೇರಿಯನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಬಿ.ಎಲ್.ರವೀಂದ್ರ, ಗುಂಡಪ್ಪ ಸೊಲಾಪುರ, ಜಟ್ಟೆಪ್ಪ ದಳಾರ, ಬಸಯ್ಯಸ್ವಾಮಿ ಇತರರಿದ್ದರು.
- ಜಿಲ್ಲಾ ಅಧೀಕ್ಷಕ ಬಿ.ಎಲ್.ರವೀಂದ್ರ ಸಲಹೆ
- ಮೇಲ್ದಜೇಗೇರಿದ ಬ್ರಾಂಚ್ ಆಫೀಸ್
ಕಕ್ಕೇರಾ: ಪಟ್ಟಣದಲ್ಲಿದ್ದ ಅಂಚೆ ಇಲಾಖೆಯ ಬ್ರ್ಯಾಂಚ್ ಆಫೀಸ್(ಬಿಒ)ನ್ನು ಇಂದಿನಿಂದ ಮೇಲ್ದರ್ಜೆಗೇರಿಸಿ ಸಬ್ ಆಫೀಸ್ (ಎಸ್ಒ)ನ್ನಾಗಿ ಪರಿವರ್ತಿಸಿದ್ದು, ಪಟ್ಟಣದ ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಅಂಚೆ ಇಲಾಖೆ ಜಿಲ್ಲಾ ಅಧೀಕ್ಷಕ ಬಿ.ಎಲ್.ರವೀಂದ್ರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೇಗೇರಿದ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಂಚೆ ಇಲಾಖೆಯ ಬ್ರ್ಯಾಂಚ್ ಆಫೀಸ್ ಇತ್ತು. ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಠೇವಣಿದಾರರು ಹಾಗೂ ಉಳಿತಾಯ ಖಾತೆದಾರರು ಮತ್ತು ಜನಸಂಖ್ಯೆಗನುಗುಣವಾಗಿ ಇಂದಿನಿಂದ ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೇಗೇರಿದ್ದು, ಇನ್ಮುಂದೆ ದೂರದ ಹುಣಸಗಿಗೆ ಅಲೆದಾಡುವುದು ತಪ್ಪಲಿದೆ ಎಂದರು.
ಆನಲೈನ್ ಪೋಸ್ಟ್ ಪೇಮಂಟ್, ಸ್ವೀಡ್ ಪೋಸ್ಟ್, ಸಂಧ್ಯಾ ಸುರಾ, ಅಂಗವಿಕಲರು ಅಂಚೆ ಇಲಾಖೆ ಖಾತೆಯ ಜತೆಗೆ ಆಧಾರ್ ಕಾರ್ಡ್, ಪೋನ್ ನಂಬರ್ ಲಿಂಕ್ ಇದ್ದರೆ ಇಲ್ಲಿಯೇ ನೇರವಾಗಿ ಹಣ ಪಡೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಎಲ್ಲ ಸೌಲಭ್ಯ ಕಲ್ಪಿಸಿದ್ದು, ಹುಣಸಗಿಯ 585215 ಪಿನ್ ಕೋಡ್ ಬದಲಿಗೆ ಈ ಮೊದಲಿದ್ದ 585285 ಪಿನ್ ಕೋಡ್ನ್ನು ಕಕ್ಕೇರಾ ಉಪ ಅಂಚೆ ಕಚೇರಿಗೆ ನೀಡಲಾಗಿದ್ದು ತಿಂಥಣಿ, ಹುಣಸಿಹೊಳೆ, ಗೋಡಿಹಾಳ್, ಶ್ರೀನಿವಾಸಪುರ, ಬೆಂಚಿಗಡ್ಡಿಯ ಬ್ರ್ಯಾಂಚ್ ಆಫೀಸ್(ಬಿಒ)ಗಳು ಇನ್ನು ಮೇಲೆ ಕಕ್ಕೇರಾದ ಉಪ ಅಂಚೆ ಕಚೇರಿಗೆ ಒಳಪಡಲಿವೆ ಎಂದು ಹೇಳಿದರು.
ಉಪ ಅಂಚೆ ಕಚೇರಿಯನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಅಂಚೆ ಉಪ ಅಧೀಕ್ಷಕ ಕೃಷ್ಣಾ ಮೋಹಿತೆ, ಐಪಿ ಮಹಾಂತೇಶ ಸುರಪುರ್, ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ ದಳಾರ್, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪೂರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್, ಸಹಕಾರ ಸಂದ ಅಧ್ಯಕ್ಷ ಅಮರಪ್ಪ ಮಂಡಿ, ಮುಖಂಡರಾದ ಬಸಯ್ಯಸ್ವಾಮಿ, ಬುಚ್ಚಪ್ಪನಾಯಕ, ಮುದ್ದಣ್ಣ ಅಮ್ಮಾಪೂರ್, ಯಂಕಣ್ಣ ಗುರಿಕಾರ, ಅಂಚೆ ಇಲಾಖೆ ಸಿಬ್ಬಂದಿ ಪರಶುರಾಮ ಹೊರಟ್ಟಿ, ಸೋಮಶೇಖರ ಗಿಟಗಿ ಇತರರಿದ್ದರು.