ಯಾದಗಿರಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಇಲ್ಲಿನ ನೇತಾಜಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ, ಗೃಹ ಸಚಿವ ಅಮೀತ್ ಷಾ, ಆಯುಕ್ತ ಜ್ಞಾನೇಶಕುಮಾರ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಅನಪುರ, ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಆೇಪ ವ್ಯಕ್ತಪಡಿಸಿದರು. ಎಸ್ಐಆರ್ ಪ್ರಕ್ರಿಯೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರ ಮತ್ತು ಚುನಾವಣಾ ಆಯೋಗ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ಕೂಡಲೇ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ರಾಜಗೋಪಾಲರೆಡ್ಡಿ, ಮುಖಂಡರಾದ ರಾವೇಂದ್ರ ಮಾನಸಗಲ್, ಆರೀಫ್ ಕಾಡ್ಲೂರು, ಮಲ್ಲಣ್ಣ ದಾಸನಕೇರಿ, ಬಾಬುರಾವ್ ಕಾಡ್ಲೂರ, ಸಂಜಯಕುಮಾರ್ ಕವಲಿ, ರಾಜಾ ಕುಮಾರ ನಾಯಕ, ಮಲ್ಲಮ್ಮ ಕೋಮಾರ, ಹೊನ್ನೇಶ ದೊಡ್ಡಮನಿ, ಮರಿಯಪ್ಪ ಬಿಳ್ಹಾರ್, ಸುದರ್ಶನ್ ನಾಯಕ್, ಕೃಷ್ಣಾ ದಾಸನಕೇರಿ, ಅಭಿಷೇಕ ದಾಸನಕೇರಿ, ಮಲ್ಲಿಕಾರ್ಜುನ್ ಈಟೆ, ಕೃಷ್ಣಾ ಚಪ್ಲಾಟೆ, ಮೈನೊದ್ಧೀನ್ ಮಿರ್ಚಿ, ಸುರೇಶ ಮಡ್ಡಿ, ರಾಜಕುಮಾರ ನಾಯಕ, ಚನ್ನಕೇಶವ ಬಾಣತಿಹಾಳ, ಚಂದ್ರಕಾಂತ ಮುನಿಪ್ಪನೋರ, ಶ್ರೀಶೈಲ ಹೊಸಮನಿ, ನೀಲಕಂಠ ಬಡಿಗೇರ, ಕಾಳಪ್ಪ ಹುಳಗೇರಿ, ಬಸವರಾಜ ನಿಲಹಳ್ಳಿ, ಅಯ್ಯಣ್ಣಾ ಹಾಲಗೇರಿ, ಸಂಗಪ್ಪ ಹಾಲಗೇರಿ, ಮಲ್ಲಣ್ಣ ದಾಸನಕೇರಿ, ಹಣಮಂತ ಲಿಂಗೇರಿ, ಬಸವರಾಜಪ್ಪ ಬಾಗಲಿ, ಸಾಬಣ್ಣ ಕಲಬುರಗಿ, ಸಾಬಣ್ಣ ಕೆಂಗೂರಿ, ಭೀಮಣ್ಣಾ ಠಾಣಗುಂದಿ, ತಿಮ್ಮಣ್ಣ ನಾಯಕ, ಸಂಜಯ ಕಾವಲಿ, ಲ್ಮಣ ರಾಠೋಡ ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.