ಯಾದಗಿರಿ: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಕುರುಬ ಸಮಾಜಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಕುರುಬ ಸಮಾಜದ ಸಂಟನೆಗಳ ಒಕ್ಕೂಟದಿಂದ ಇಲ್ಲಿನ ಡಿಸಿ ಕಚೇರಿ ಎದುರು ಸೋಮವಾರದಿಂದ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಈ ವೇಳೆ ಮಾತನಾಡಿದ ಕೋಮರಾಮ್ ಭೀಮಗೊಂಡ ಗೊಂಡ ಕುರುಬ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ, ಒಕ್ಕೂಟದ ಜಿಲ್ಲಾ ಸಂಚಾಲಕ ಶಿವಕುಮಾರ ಮುನಗಲ್ಲ, ಸ್ವತಂತ್ರ ಪೂರ್ವದಿಂದಲೂ ಕುರುಬ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡಲಾಗುತ್ತಿದೆ. ಪಕ್ಕದ ಬೀದರ್ ಜಿಲ್ಲೆಯಲ್ಲಿ ಈಗಲೂ ಅಲ್ಲಿನ ಜಿಲ್ಲಾಡಳತ ಪ್ರಮಾಣಪತ್ರ ನೀಡುತ್ತಿದೆ. ಗೊಂಡ, ಕುರುಬ ಎರಡು ಒಂದೇ ಆಗಿದ್ದು, ಬೀದರ್ ಜಿಲ್ಲೆಯಲ್ಲಿ ಗೊಂಡ ಅಂತ ಇದ್ದರೆ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕುರುಬ ಎಂದು ಕರೆಯಲಾಗುತ್ತದೆ. ಆದರೆ ಪದಗಳ ವ್ಯತ್ಯಾಸವನ್ನೆ ಮುಂದೆ ಮಾಡಿ ಈ ಎರಡು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್ಟಿ ಪ್ರಮಾಣಪತ್ರ ನೀಡಲು ಜಿಲ್ಲಾಡಳಿತ ಮತ್ತು ತಹಸೀಲ್ದಾರರು ನಿರಾಕರಿಸುವ ಮೂಲಕ ಈ ಸಮುದಾಯಕ್ಕೆ ಘೋರ ಅನ್ಯಾಯ ಮಾಡಲಾಗುತ್ತಿದೆ ಎಂದು ವರು ಆರೋಪಿಸಿದರು.
ಕಳೆದ 40 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳಿಂದ ನ್ಯಾಯ ಸಿಗುತ್ತಿಲ್ಲ, ಕಾರಣ ಈ ಹೋರಾಟ ಮಹತ್ವದ್ದಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಲಿದೆ ಎಂದರು. ಆದಿವಾಸಿ, ಬುಡಕಟ್ಟು ಕಾಡುಕುರುಬ, ಜೇನು ಕುರುಬ ಸಂಟನೆ ಜಿಲ್ಲಾಧ್ಯಕ್ಷ ಗೋಪಾಲ ಎಂ.ಪಿ., ಗೊಂಡ ಸಮಾಜದ ಮುಖಂಡರಾದ ಬಾಲಾಜಿ ಜಬಾಡೆ, ಮಹಾದೇವಪ್ಪ ಕಾಡಂನೊರ, ಗಿರೀಶ ಕವಡೆ, ಬಾಗೇಶ ಮರತೂರ, ತಿಪ್ಪಣ್ಣಗೌಡ, ಭೀಮರಾಯ ಭಂಡಾರಿ, ರೇವಣಸಿದ್ದಪ್ಪ ಗುಂಡಾಪುರ, ರಾಜು ಪತೆಪುರೆ, ಸಿದ್ದು ಪೂಜಾರಿ, ಎಸ್. ನಿಜಲಿಂಗಪ್ಪ, ದೇವೀಂದ್ರಪ್ಪ ಇತರರಿದ್ದರು.