ಯಾದಗಿರಿ: ವಿಧಾನ ಪರಿಷತ್ ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೆ ಆನ್ಲೈನ್ ಮೂಲಕ ಚಾಕುಗಳನ್ನು ಕಳುಹಿಸಿ ಬೆದರಿಸಲು ಯತ್ನಿಸಿರುವುದನ್ನು ಖಂಡಿಸಿ ಬಿಜೆಪಿಯಿಂದ ಸುಭಾಷ್ಚಂದ್ರ ಬೋಸ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ೂಷಣೆ ಕೂಗುತ್ತ ಬೆದರಿಕೆ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದರಲ್ಲದೆ ರಾಜಕೀಯ ವಿರೋಧಿಗಳನ್ನು ಭಯಭೀತಗೊಳಿಸಿ ಸಮಾಜದಲ್ಲಿ ಅಶಾಂತಿ ಮತ್ತು ಆತಂಕದ ವಾತಾವರಣ ನಿರ್ಮಿಸಲು ಪ್ರಯತ್ನಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್, ದೇವೇಂದ್ರನಾಥ ನಾದ್, ಖಂಡಪ್ಪ ದಾಸನ, ಪರಶುರಾಮ ಕುರಕುಂದಾ ಮಾತನಾಡಿ, ಇದು ಕೇವಲ ಒಬ್ಬ ನಾಯಕನಿಗೆ ಹಾಕಿದ ಬೆದರಿಕೆಯಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾಕಿದ ಸವಾಲಾಗಿದೆ ಎಂದು ಜರಿದರು.
ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಹಜ. ಆಡಳಿತ ಮತ್ತು ವಿಪಗಳ ನಡುವೆ ಟೀಕೆ&ಟಿಪ್ಪಣಿ, ಚರ್ಚೆ ಜತೆ ಹೋರಾಟಗಳು ನಡೆಯುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಆದರೆ ರಾಜಕೀಯ ವಿರೋಧವನ್ನು ವೈಯಕ್ತಿಕ ದ್ವೇಷಕ್ಕೆ ತಿರುಗಿಸಿ ಬೆದರಿಕೆ ಹಾಕಿ ಭಯ ಮೂಡಿಸುವಷ್ಟರ ಮಟ್ಟಕ್ಕೆ ಕೊಂಡೊಯ್ಯುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಗುಡುಗಿದರು.
ಚಾಕು ಕಳುಹಿಸಿ ಬೆದರಿಸಲು ಯತ್ನಿಸಿರುವ ಪ್ರಕರಣವನ್ನು ಪೊಲೀಸರು ಗಂಭೀರ ಪರಿಗಣಿಸಬೇಕು. ಟನೆ ಹಿನ್ನೆಲೆಯನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡರಾದ ಸಿದ್ದಣ್ಣಗೌಡ ವಡಿಗೇರಾ, ನಾಗರತ್ನ ಕುಪ್ಪಿ, ಶರಣಭೂಪಾಲರಡ್ಡಿಗೌಡ ನಾಯ್ಕಲ್, ಶರಣಗೌಡ ಬಾಡಿಯಾಳ, ಪ್ರಮುಖರಾದ ಲಿಂಗಪ್ಪ ಹತ್ತಿಮನಿ, ಸುನಿತಾ ಚವ್ಹಾಣ್, ವೀಣಾ ಮೋದಿ, ಲಕ್ಷಿ$್ಮಪುತ್ರ ಮಾಲಿಪಾಟೀಲ, ರಾಜಶೇಖರ ವಡಿಗೇರಾ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಶಿವು ಕೊಂಕಲ, ನಾಗರೆಡ್ಡಿ ಇಬ್ರಾಹಿಂಪುರ ಇತರರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ, ಪ್ರಶ್ನಿಸುವ ಮತ್ತು ವಿರೋಧಿಸುವ ಹಕ್ಕಿದೆ. ವಿಪ ನಾಯಕರು ಸರ್ಕಾರದ ನೀತಿಗಳನ್ನು ಟೀಕಿಸಿದರೆ ರಾಜಕೀಯವಾಗಿ ಉತ್ತರ ನೀಡಬೇಕೇ ಹೊರತು, ಬೆದರಿಕೆಗಳ ಮೂಲಕ ಮೌನಗೊಳಿಸುವ ಪ್ರಯತ್ನ ಮಾಡಬಾರದು. ಇಂತಹ ಟನೆಗಳು ರಾಜಕೀಯ ಸಂಸತಿಗೆ ಕಪ್ಪುಚುಕ್ಕೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.