ಯಾದಗಿರಿ: ನಗರದಲ್ಲಿ ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಆಯುಷ್ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಭರವಸೆ ನೀಡಿದರು.
ನಗರದ ಹೊರವಲಯದಲ್ಲಿರುವ ನಿವೇದಿತಾ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಆಯುಷ್ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಮಲೆನಾಡು ಭಾಗದಲ್ಲಿ ಬಹುತೇಕ ಜನರು ಹಲವು ರೋಗಗಳಿಗೆ ಕಡಿಮೆ ಖರ್ಚಿನಲ್ಲಿ ಆಯುಷ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ಈ ಜಿಲ್ಲೆಯ ರೋಗಿಗಳು ಚಿಕಿತ್ಸೆ ಪಡೆಯಲು ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ರಾಜ್ಯದ ಧರ್ಮಸ್ಥಳ, ಉಡುಪಿ, ಹಾಸನ, ಕಾರವಾರ ನಗರಗಳಿಗೆ ಹೋಗಿ ಬರುತ್ತಿರುವುದನ್ನು ಗಮನಿಸಿದ್ದೇವೆ. ಆಯುರ್ವೇದ ಚಿಕಿತ್ಸೆಯ ಮಹತ್ವ ಕರೊನಾ ವೈರಸ್ ದಾಳಿ ಸಂದರ್ಭದಲ್ಲಿ ತಿಳಿದು, ಸೂಕ್ತ ಔಷಧ ತೆಗೆದುಕೊಂಡು ಅದರಿಂದ ಅಪಾಯ ತಪ್ಪಿಸಿಕೊಂಡರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪತ್ರಕರ್ತ ಮಲ್ಲಿಕಾರ್ಜುನರಡ್ಡಿ ಹತ್ತಿಕುಣಿ, ಇಂದು ನಾವೇಲ್ಲರೂ ನಿಸರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಯೋಗ, ಧ್ಯಾನ, ನಿರಂತರ ರಚನಾತ್ಮಕ ಚಟುವಟಿಕೆಗಳ ಜೀವನ ಮೈಗೂಡಿಸಿಕೊಳ್ಳಬೇಕು ಅಂದಾಗ ಮಾತ್ರ ಆರೋಗ್ಯದಿಂದ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಆಯುರ್ವೇದ ಚಿಕಿತ್ಸೆಯಿಂದ ನಮ್ಮ ಶರೀರದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ರೋಗಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಯುಷ್ ಇಲಾಖೆಯ ಚಟುವಟಿಕೆಗಳ ವೇಗ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಜೆ ಮಾತನಾಡಿ, ನಮ್ಮ ಇಲಾಖೆಯಿಂದ ಪ್ರತಿವರ್ಷ ಅಗತ್ಯವಿರುವ ಸರ್ಕಾರಿ ವಿವಿಧ ಕಚೇರಿಗಳಲ್ಲಿ ಆಚರಿಸಿಕೊಂಡು ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ ಸೇವಾ ೇತ್ರವಾಗಿರುವ ನರ್ಸಿಂಗ್ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ತ ವೈಧ್ಯರಿಂದ ಹಲವು ವಿಷಯಗಳ ಬಗ್ಗೆ ಉಪನ್ಯಾಸ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಿಗಳಿಂದ ಆಯುರ್ವೇದ ಚಿಕಿತ್ಸೆಯ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಶಿಣ ಸಂಸ್ಥೆ ಕಾರ್ಯದರ್ಶಿ ಮದುಸೂಧನ ದಾಸನ್, ಹಿರಿಯ ವೈದ್ಯಾಧಿಕಾರಿ ಡಾ.ಪ್ರಮೋದ ಕುಲಕರ್ಣಿ, ಪಿಎಸ್ಐ ಶಶಿಕಾಂತ ಕುಲಕರ್ಣಿ ಸೇರಿ ಇತರರಿದ್ದರು. ಡಾ.ರೋಹಿಣಿ ಸ್ವಾಗತಿಸಿದರು, ಸಂಗಮೇಶ ಕೆಂಭಾವಿ ನಿರೂಪಿಸಿದರು. ಡಾ.ಮಹೇಶ ಮಹಾಮನಿ ವಂದಿಸಿದರು.