ಸುರಪುರ: ಮಹರ್ಷಿ ವಾಲ್ಮೀಕಿ ಅವರು ಕೇವಲ ಆದಿಕವಿಯಷ್ಟೇ ಅಲ್ಲದೆ, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ ಮಹಾನ್ ದಾರ್ಶನಿಕ ಎಂದು ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣವು ಕೇವಲ ಮಹಾಕಾವ್ಯವಲ್ಲ, ಬದುಕಿನ ಮೌಲ್ಯಗಳು, ಆಡಳಿತದ ಕರ್ತವ್ಯಗಳು ಮತ್ತು ಸಾಮಾಜಿಕ ಆದರ್ಶಗಳನ್ನು ತಿಳಿಸುವ ಮಹತ್ವದ ಗ್ರಂಥವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು ಹಾಗೂ ಅನ್ಯಾಯಕ್ಕೊಳಗಾದವರಿಗೆ ರಣೆ ಮತ್ತು ನೆರವು ಸಿಗಬೇಕು ಎಂಬ ಮಾನವೀಯ ಸಂದೇಶವನ್ನು ರಾಮಾಯಣ ಸಾರುತ್ತದೆ ಎಂದು ಹೇಳಿದರು.
ರಾಮಾಯಣದಲ್ಲಿ ಸಿಯರ ಗೌರವ ಮತ್ತು ನತೆಗೆ ಮಹತ್ವ ನೀಡಲಾಗಿದೆ. ಮಹಿಳೆಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆಡಳಿತ ನಡೆಸುವವರು ಜನರ ಹಿತಕ್ಕೆ ಆದ್ಯತೆ ನೀಡಿ, ನ್ಯಾಯ ಮತ್ತು ಧರ್ಮದ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಮೌಲ್ಯಯುತ ಸಂದೇಶವೂ ರಾಮಾಯಣದಲ್ಲಿದೆ ಎಂದು ಹೇಳಿದರು.
ಸಾಹಿತಿ ಡಾ.ಅರುಣ್ ಜೋಳದ ಕೂಡ್ಲಿಗಿ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಜಯಂತಿಯು ಸಮುದಾಯದ ಶೈಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕುರಿತು ಚರ್ಚಿಸುವುದರ ಜತೆಗೆ ಸಂವಿಧಾನಾತ್ಮಕ ಹಕ್ಕುಗಳ ಅರಿವು ಮೂಡಿಸುವ ವೇದಿಕೆಯಾಗಬೇಕು ಎಂದರು.
ತಹಸೀಲ್ದಾರ್ ಎಚ್.ಎ.ಸರಕವಾಸ್ ಅಧ್ಯತೆ ವಹಿಸಿದ್ದರು. ವಾಲ್ಮೀಕಿ ನಾಯಕ ಸಂದ ಅಧ್ಯ ಭೀಮನಗೌಡ ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಟಿಎಚ್ಒ ಡಾ.ಆರ್.ವಿ.ನಾಯಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೊಹಮ್ಮದ್ ಸಲೀಂ, ಸಿಪಿಐ ಉಮೇಶ ಎಂ. ನಾಯಕ, ಬಿಇಒ ಡಾ. ನಿಂಗರಾಜ ಮೂಲಿಮನಿ ಹಾಗೂ ಪೌರಾಯುಕ್ತ ಬಸವರಾಜ ಟಣಕೇದಾರ್ ಇತರರಿದ್ದರು. ಎಸ್ಡಿಎ ರವಿ ನಾಯಕ ಸ್ವಾಗತಿಸಿದರು. ಶಿಕ ಮಹಾದೇವಪ್ಪ ಗುತ್ತೇದಾರ್ ನಿರೂಪಿಸಿ, ವಂದಿಸಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದತ್ತು ನಾಯಕ ಎಸ್. ಗುತ್ತೇದಾರ, ಭೀಮರಾಯ ಮರೆಪ್ಪ ಡೊಣ್ಣೇಗೇರಾ, ವಿಜಯಕುಮಾರ ಪ್ರಕಾಶ ನಾಯಕ, ಲ್ಮ ಮಾನಯ್ಯ ದೊರೆ ಮತ್ತು ರೂಪ ಅಂಬರೀಶ, ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಸೃಷ್ಟಿ ಶ್ರೀನಿವಾಸ ಲ್ಮಪುರ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಬಸವರಾಜ ಮಲ್ಲಿಕಾರ್ಜುನ ಜಾಲಹಳ್ಳಿ, ಚಂದ್ರಶೇಖರ ನಾಯಕ ಗುಡ್ಡಾಕಾಯಿ ಅವರನ್ನು ಸನ್ಮಾನಿಸಲಾಯಿತು.