ಜಿಲ್ಲೆ

VIDEO| ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕನ ದುರಂತ ಅಂತ್ಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಯಾದಗಿರಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.

ರಮೇಶ ಸಾಸನೂರು ಮೃತಪಟ್ಟ ಯುವಕ. ನಿನ್ನೆ ಗ್ರಾಮದಲ್ಲಿ ಗ್ರಾಮದೇವತೆ ಅದ್ದೂರಿ ಜಾತ್ರೆ ನಡೆಸಲಾಗಿತ್ತು. ಜಾತ್ರೆಯಲ್ಲಿ ಕುರಿ ಬಲಿಕೊಟ್ಟು ನಂತರ ರಥ ಸಾಗಿದ ಬೆನ್ನಲ್ಲೇ ಚಕ್ರಕ್ಕೆ ಯುವಕ ಸಿಲುಕಿ ಸಾವಿಗೀಡಾಗಿದ್ದಾನೆ.

ಕುರಿ ಬಲಿ ಹಾಗೂ ಚಕ್ರಕ್ಕೆ ಸಿಲುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಗ್ರಾಮಸ್ಥರು ಕುರಿ ಬಲಿಕೊಟ್ಟಿರುವ ಆರೋಪ ಎದುರಾಗಿದೆ.

ಜಾತ್ರೆ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರ ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)