ಹೊಸೂರು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರನ್ನು ಚೇತನರಾಜ್ ಕಣ್ಣೂರು, ಶರತ್ ನಾಗಪ್ಪ, ಸೋಮಶೇಖರ ಲಾವಿಗೆರೆ ಇತರರು ಸನ್ಮಾನಿಸಿದರು.  
ಜಿಲ್ಲೆ

ಯಡೇಹಳ್ಳಿ ಗ್ರಾಪಂನಲ್ಲಿ ಬಿಜೆಪಿ ಪ್ರಾಬಲ್ಯ

Shivamogga - Desk - Vinayakumar D B

ಆನಂದಪುರ: ಯಡೇಹಳ್ಳಿ ಗ್ರಾಪಂನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರೇಣುಕಮ್ಮ ಹಾಗೂ ಉಪಾಧ್ಯಕ್ಷರಾಗಿ ನ್ಯಾರಿ ಲೋಕಪ್ಪ ಅವಿರೋಧವಾಗಿ ಆಯ್ಕೆಗೊಂಡರು.

ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಆನಂದಪುರಂ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ ಗೌಡ ಆಚಾಪುರ ಇತರರಿದ್ದರು.

ಹೊಸೂರು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ
ಹೊಸೂರು ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೇವತಿ ಮತ್ತು ಉಪಾಧ್ಯಕ್ಷರಾಗಿ ವರದಾಮೂಲ ಚೌಡಪ್ಪ ಅವಿರೋಧವಾಗಿ ಆಯ್ಕೆಯಾದರು. ಕಳೆದ 25 ವರ್ಷಗಳ ಅವಧಿಯಲ್ಲಿ ಅವಿರೋಧವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ಇದೇ ಮೊದಲು. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಲಾವಿಗೆರೆ, ಚೇತನರಾಜ್ ಕಣ್ಣೂರು, ಮಾಜಿ ಅಧ್ಯಕ್ಷ ಶರತ್ ನಾಗಪ್ಪ ಇತರರಿದ್ದರು.