ಮೂರು ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಟಾಪರ್ | ಫಲಿತಾಂಶ ಪಾತಾಳಕ್ಕಿಯಲು ಕಾರಣ ಹಲವು
ಶರಣು ಗೊಬ್ಬೂರ ಯಾದಗಿರಿ
ಪಿಯುಸಿ ದ್ವಿತೀಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಈ ಸಲ ಗಿರಿಜಿ¯್ಲೆ ಕೊನೆ ಸ್ಥಾನ ಪಡೆದಿದೆ. ಕಳಪೆ ಸಾಧನೆ ಮಾಡಿರುವುದು ಆಡಳಿತ ಯಂತ್ರದ ಕಾರ್ಯವೈಖರಿ ತೋರಿಸಿದೆ. ೨೦೨೩-೨೪ ನೇ ಸಾಲಿನಲ್ಲಿ ೨೬ ನೇ ಸ್ಥಾನ ಪಡೆದಿದ್ದ ಜಿ¯್ಲÉ ಈ ಸಲ ಇನ್ನಷ್ಟು ಮೇಲಕ್ಕೆ ಹೊಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಜಿಲ್ಲೆಯಲ್ಲಿ ೯,೪೧೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ೪೫೬೩ ಮಕ್ಕಳು ಪಾಸಾಗಿz್ದÁರೆ. ಪಾಸಾದವರ ಪೈಕಿ ಕಲಾ ವಿಭಾಗದಲ್ಲಿ ೨,೦೭೮, ವಾಣಿಜ್ಯದಲ್ಲಿ ೩೬೨ ಮತ್ತು ವಿe್ಞÁನ ವಿಭಾಗದಲ್ಲಿ ೨,೨೬೪ ವಿದ್ಯಾರ್ಥಿಗಳು ಉತ್ತೀರ್ಣರಾಗಿz್ದÁರೆ. ವಿe್ಞÁನ ವಿಭಾಗದಲ್ಲಿ ಯಾದಗಿರಿಯ ಸಿದ್ದಲಿಂಗೇಶ್ವರ ಪಿಯು ಕಾಲೇಜಿನ ರಾಜೇಶ್ವರಿ ಗಣೇಶ ಬಹದ್ದೂರ ೫೮೨ ಅಂಕಗಳೊAದಿಗೆ ಶೇ ೯೭ ರಷ್ಟು ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ಟಾಪರ್ ಆಗಿ ಹೊರಮ್ಮಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ನಗರದ ಜವಾಹರ ಪಿಯು ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ಶಿವರಾಜರಡ್ಡಿ ಮಾದ್ವಾರಂ ೫೭೦ ಅಂಕ ಕಲಾ ವಿಭಾಗದಲ್ಲಿ ಶಹಾಪುರ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ನಜೀಮಾ ಮಕ್ತುಂಬಾದುಶಾ ಹೊಕ್ರಾಣಿ ೫೮೧ಅಂಕಗಳೊAದಿಗೆ ಶೇ.೯೬.೮೬ ರಷ್ಟು ಫಲಿತಾಂಶ ಪಡೆದು ಟಾಪರ್ ಆಗಿದ್ದಾರೆ. ಮೂರು ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಅತ್ಯಧಿಕ ಅಂಕ ಗಳಿಸಿ ಮೇಲುಗೈ ಸಾಧಿಸಿದ್ದಾರೆ.
ಕೊನೆ ಸ್ಥಾನಕ್ಕೆ ಕಾರಣವೇನು ?
ಜಿಲ್ಲೆಯಲ್ಲಿ ೨೩ ಸರ್ಕಾರಿ ಪಿಯು ಕಾಲೇಜುಗಳಿವೆ. ಅವುಗಳಲ್ಲಿ ಕೇವಲ ಎರಡು ಕಡೆ ಮಾತ್ರ ಖಾಯಂ ಪ್ರಾಚಾರ್ಯರಿದ್ದು, ಉಳಿದ ೨೧ ಕಾಲೇಜುಗಳಲ್ಲಿ ಉಪನ್ಯಾಸಕರೇ ಆಡಳಿತ ಮತ್ತು ಪಾಠ ಮಾಡುವ ಅನಿವಾರ್ಯತೆ ಇದೆ. ಎಲ್ಲ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ೨೨೭ ಹುದ್ದೆಗಳಿದ್ದು ಅವರಲ್ಲಿ ಕೇವಲ ೧೩೩ ಖಾಯಂ ಉಪನ್ಯಾಸಕರಿದ್ದಾರೆ. ೯೪ ಹುದ್ದೆಗಳು ಖಾಲಿ ಇವೆ. ೧೨೦ ಅತಿಥಿ ಉಪನ್ಯಾಸಕರಿದ್ದು ವಾರಕ್ಕೆ ೧೨ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಖಾಯಂ ಉಪನ್ಯಾಸಕರು ವಾರದಲ್ಲಿ ೨೦ ತರಗತಿಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಉಪನ್ಯಾಸಕರ ಕೊರತೆಯಿಂದಾಗಿ ಈ ಸಲ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಗಿರಿ ಜಿಲ್ಲೆ ಇಳಿಯಬೇಕಾಯಿತೆಂಬ ತರ್ಕ ಜಿಲ್ಲೆಯ ಶಿಕ್ಷಣ ಪರಿಣಿತರದ್ದು.
ಎಲ್ಲ ೩೪ ವಿದ್ಯಾರ್ಥಿಗಳು ಅನುತ್ತೀರ್ಣ
ಯಾದಗಿರಿ ಜಿಲ್ಲೆಗೆ ವಿಜ್ಞಾನದಲ್ಲಿ ಶೇ.೬೦.೩೬, ವಾಣಿಜ್ಯದಲ್ಲಿ ೩೬.೯೮ ಮತ್ತು ಕಲಾ ವಿಭಾಗದಲ್ಲಿ ೩೩.೮೮ ರಷ್ಟು ಫಲಿತಾಂಶ ಲಭಿಸಿದೆ. ಸರಾಸರಿ ಶೇ.೪೮.೪೫ರಷ್ಟು ಬಂದಿದೆ.ಸುರಪುರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಎಲ್ಲ ೩೪ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಶೂನ್ಯ ಫಲಿತಾಂಶ ಪಡೆದಿದೆ.
| ಚನ್ನಬಸಪ್ಪ ಕುಳಗೇರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಸೆಕ್ಯೂರಿಟಿ ಗಾರ್ಡ್ ಟಾಪರ್ ಪುತ್ರಿಯ ವೈದ್ಯೆ ಕನಸು
ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುವ ಮೂಲತಃ ಉತ್ತರ ಪ್ರದೇಶದ ಗಣೇಶ ಬಹಾದ್ದೂರ್ ಪುತ್ರಿ ರಾಜೇಶ್ವರಿ ಯಾದಗಿರಿಯ ಸಿದ್ದಲಿಂಗೇಶ್ವರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.೯೭ರಷ್ಟು ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಕಳೆದ ಎರಡುವರೆ ದಶಕಗಳಿಂದ ಯಾದಗಿರಿಯಲ್ಲಿ ವಾಸವಿರುವ ಈ ಕುಟುಂಬದ ಕುಡಿ ಆರಂಭದಿAದಲೂ ಓದಿನಲ್ಲಿ ಮುಂದೆ. ಕಠಿಣ ಪರಿಶ್ರಮ, ಕಾಲೇಜಿನಲ್ಲಿ ಉಪನ್ಯಾಸಕರ ಉತ್ತಮ ಸಹಕಾರ ಮತ್ತು ಮನೆಯಲ್ಲಿ ತಂದೆ,ತಾಯಿಯರ ಸಲಹೆ ಮತ್ತು ವಿಜಯವಾಣಿ ವಿದ್ಯಾರ್ಥಿ ಮಿತ್ರದಲ್ಲಿನ ಅನೇಕ ವಿಷಯಗಳ ಬೆಂಬಲದಿAದ ನಾನು ಅತ್ಯಧಿಕ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ ಎನ್ನುತ್ತಾಳೆ ರಾಜೇಶ್ವರಿ. ಮುಂದೆ ನಿಟ್ ಬರೆದು ವೈದ್ಯಳಾಗಬೇಕೆಂಬ ಕನಸು ಹೊತ್ತಿದ್ದಾಳೆ.
ಸಿಎ ಆಗುವ ಗುರಿ
ಮೂಲತಃ ನಮ್ಮದು ಚಿತ್ತಾಪುರ ತಾಲೂಕಿನ ರಾವೂರ.ಯಾದಗಿರಿಯ ಜವಾಹರ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು ಹಾಸ್ಟೇಲ್‌ನಲ್ಲಿದ್ದು ಓದಿz್ದÉÃನೆ. ಕಾಲೇಜಿನಲ್ಲಿ ಶಿಕ್ಷಕರ ಅಪಾರ ಬೆಂಬಲ ಸಿಕ್ಕಿದೆ. ಕಠಿಣ ಅಭ್ಯಾಸ ಮಾಡುವುದಕ್ಕೆ ಎಲ್ಲ ಸಹಕಾರ ಕಾಲೇಜಿನವರು ಮತ್ತು ಹೆತ್ತವರು ನೀಡಿದ್ದಾರೆ. ಜೊತೆಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ತಪ್ಪದೇ ಓದುತ್ತಿದೆ, ಇದರಿಂದಾಗಿ ಜಿಲ್ಲೆಗೆ ಟಾಪರ್ ಆಗಲು ಸಾಧ್ಯವಾಗಿದೆ.ಮುಂದೆ ಸಿಎ ಮಾಡುವ ಗುರಿ ಹೊಂದಿz್ದÉÃನೆ.
|ನಾಗವೇಣಿ ವಿದ್ಯಾರ್ಥಿನಿ,ಯಾದಗಿರಿ
ಐಎಎಸ್ ಮಾಡುವ ಆಸೆ
ಹೈಸ್ಕೂಲ್‌ನಲ್ಲಿ ಟಾಪರ್ ಆಗಿದ್ದೆ. ಹೆತ್ತವರು ಮತ್ತು ಶಿಕ್ಷಕರು ಪಿಯುಸಿ ವಿಜ್ಞಾನ ಓದಲು ಹೇಳಿದ್ದರು. ಆದರೆ, ಐಎಎಸ್ ಮಾಡುವ ಉz್ದÉÃಶವಿದ್ದರಿಂದ ಕಲಾ ವಿಭಾಗ ಆಯ್ಕೆ ಮಾಡಿಕೊಂಡು ಕುಟುಂಬಸ್ಥರ ಮತ್ತು ಕಾಲೇಜಿನ ಉಪನ್ಯಾಸಕರ, ಪ್ರಾಚಾರ್ಯರ ಸಹಕಾರದಿಂದ ಕಠಿಣ ಅಭ್ಯಾಸ ಮಾಡುವ ಮೂಲಕ ಜಿಲ್ಲೆಗೆ ಟಾಪರ್ ಆಗಿz್ದÉÃನೆ.
| ನಸಿಮಾ ಬಾನು, ಕಲಾ ವಿಭಾಗದ ಟಾಪರ್ ವಿದ್ಯಾರ್ಥಿನಿ ಶಹಾಪುರ
----