ಜಿಲ್ಲೆ

ಶಾಸಕ ತುನ್ನೂರ ತೇಜೋವಧಗೆ ಹುನ್ನಾರ

ಕಾಂಗ್ರೆಸ್ ವಕ್ತಾರ ಮಾಳಿಕೇರಿ ಕಿಡಿ | ಚೆನ್ನಾರೆಡ್ಡಿ ತುನ್ನೂರ ಜಾತಿ ನಿಂದನೆ ಮಾಡುವವರಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಜಾತಿವಾದಿಗಳಲ್ಲ, ಯಾರಿಂದಲು ಲಂಚ ಪಡೆಯುವ ವ್ಯಕ್ತಿ ಅಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಮಸನ್ ಮಾಳಿಕೇರಿ ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಲವತ್ತು ವರ್ಷಗಳಿಂದ ಶಾಸಕರು, ಸಾರ್ವಜನಿಕ ಜೀವನದ್ದಲ್ಲಿದ್ದಾರೆ. ಅವರು ಎಂದಿಗೂ ಜಾತಿ ನಿಂದನೆ ಮಾಡಿದವರಲ್ಲ. ಮಾಡುವುದು ಇಲ್ಲ ಎಂದರು.
ಇವತ್ತಿಗೂ ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ.ಸುಸAಸ್ಕೃತರು. ಮನೆತನದಿಂದಲೇ ಆರ್ಥಿಕವಾಗಿ ಸಬಲರಾಗಿದ್ದು ಯಾರಿಂದಲ್ಲೂ ಲಂಚ ಪಡೆಯುವ ಮಾಡುವರಲ್ಲ. ಪಿಎಸ್‌ಐ ಪರಶುರಾಮ ಸಾವಿನ ನೋವು ನಮಗೂ ಇದೆ. ಹೀಗೆ ಆಗಬಾರದಿತ್ತು. ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ನಡೆದು ಸತ್ಯಾಂಶ ಹೊರಬರಲಿ. ತಪ್ಪಿಸ್ಥರು ಯಾರೇ ಇರಲಿ, ಅವರಿಗೆ ಶಿಕ್ಷೆ ಆಗಲಿ ಎಂದು ತಿಳಿಸಿದರು.
ಪ್ರತಿಭಟನೆ ನೆಪದಲ್ಲಿ ಶಾಸಕರ ವಿರುದ್ಧ ಬಳಸಿದ ಕೆಲ ಪದಗಳು ಸರಿಯಲ್ಲ. ಕೆಲವರಂತೂ ಬಾಯಿಗೆ ಬಂದAತೆ ಮಾತನಾಡಿದ್ದನ್ನು ಖಂಡಿಸಿದರು. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ.ಅದನ್ನು ಮೀರಿ ಯಾರು ಹೋಗುವಂತಿಲ್ಲ. ಶಾಸಕರು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಅದು ಬಿಟ್ಟು ಎಲ್ಲವೂ ಅವರೇ ನಿರ್ಧಾರ ಮಾಡಿದಂತೆ ಶಾಸಕರ ತೆಜೋವಧೆಗೆ ಮುಂದಾಗಿದ್ದು ತಪ್ಪು ಎಂದು ಮಾಳಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ್, ಮುಖಂಡರಾದ ಸಾಬಣ್ಣ ಕೆಂಗೋರಿ, ಮಲ್ಲಿಕಾರ್ಜುನ ಈಟೆ, ಅಂಬರೀಶ ಜಾಕಾ, ಲಕ್ಷಾö್ಮರಡ್ಡಿ, ತಿಮ್ಮಣ್ಣ ನಾಯಕ್, ಶರಣಗೌಡ ಮಾಲಿಪಾಟೀಲ್, ಸುರೇಶ ಮಡ್ಡಿ ಮೊದಲಾದವರಿದ್ದರು.