ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ನಡೆ ಗ್ರಾಪಂಗಳ ಕಡೆ ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಮಾತನಾಡಿದರು. ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಎಚ್.ಜೆ.ಶಾರದಾ, ಬಿ.ಸದಾಶಿವಪ್ಪ, ವಿಜಯಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಜೆರಾಕ್ಸ್ ಪ್ರತಿ ಒಪ್ಪದ ಕಂಡಕ್ಟರ್‌ಗಳು

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಎಮ್ಮಿಗನೂರು ಮತ್ತು ನೆಲ್ಲೂಡಿ ಗ್ರಾಮದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ನಡೆ ಗ್ರಾಪಂಗಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರು ಬಸ್ ತಡೆದರೆ ಸರ್ಕಾರಿ ಬಸ್ ನಿಲ್ಲಿಸುತ್ತಿಲ್ಲ. ಪಿಡಿಎಫ್ ಅಥವಾ ಜೆರಾಕ್ಸ್ ಆಧಾರ್ ತೋರಿಸಿದರೆ ನಿರ್ವಾಹಕರು ಮೂಲ ಪ್ರತಿ ತೋರಿಸುವಂತೆ ಒತ್ತಾಯಿಸುತ್ತಾರೆ. ಬಳ್ಳಾರಿ ಕಡೆ ಸಕಾಲದಲ್ಲಿ ಬಸ್‌ಗಳಿಲ್ಲ. ಉದ್ದೇಶಪೂರ್ವಕವಾಗಿ ಕುರುಗೋಡು ಬಸ್ ಡಿಪೋ ಅಧಿಕಾರಿಗಳು ಸಭೆ ಹಾಜರಾಗಿಲ್ಲ. ಅವರನ್ನು ಸಭೆಗೆ ಕರೆಸುವಂತೆ ಫಲಾನುಭವಿಗಳು ಒತ್ತಾಯಿಸಿದರು.

ಹೊಸ ಪಡಿತರ ಚೀಟಿ ನೀಡುತ್ತಿಲ್ಲ. ಈಗಾಗಲೇ ನೀಡಿದ ಹೊಸಪಡಿತರ ಚೀಟಿಗೆ ಯೋಜನೆಗಳನ್ನು ಒದಗಿಸುವಂತೆ, ಕೆಲವೆಡೆ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸುವಂತೆ ಜನರು ಆಗ್ರಹಿಸಿದರು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಮಾತನಾಡಿ, ಪಂಚ ಗ್ಯಾರಂಟಿಗಳ ಕುಂದುಕೊರತೆಗಳನ್ನು ನೀಗಿಸಿ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಐದು ಇಲಾಖೆ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಗ್ರಾಪಂ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಪಿಡಿಒಗಳಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷೆಯರಾದ ಎಚ್.ಜೆ.ಶಾರದಾ, ಜಯಮ್ಮ, ಪಿಡಿಒಗಳಾದ ತಾರುಲಕ್ಷ್ಮಣನಾಯ್ಕ, ಹಾಲಹರವಿ ಶೇಷಗಿರಿ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಜಭಕ್ಷಿ, ರೇಣುಕಮ್ಮ, ರುದ್ರಮ್ಮ, ಶ್ರೀನಿವಾಸ, ವಿಜಯಲಕ್ಷ್ಮೀ, ಕರಿಯಪ್ಪ, ಪಕ್ಕೀರಪ್ಪ, ಪ್ರಮುಖರಾದ ಬಿ.ಸದಾಶಿವಪ್ಪ, ಎಚ್.ಮಂಜುನಾಥ ಇತರರಿದ್ದರು.