ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿನ ಆರ್ಥಿಕವಾಗಿ ಹಿಂದುಳಿದ, ಎಸ್ಸಿ, ಎಸ್ಟಿ ಸಮುದಾಯ ಹಾಗೂ ಅಂಗವಿಕಲರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
2025-26ನೇ ಸಾಲಿನ ಮುಕ್ತ ನಿಧಿ ಮತ್ತು ಪುರಸಭೆ ನಿಧಿ ಅನುದಾನದಡಿಯಲ್ಲಿ ಶೇ.24.10ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ, ಶೇ.7.25ರಷ್ಟು ಇತರೆ ಮತ್ತು ಶೇ.5ರಷ್ಟು ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಗೆ ಸಹಾಯಧನ ನೀಡಲಾಗುವುದು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಿದ ವೈಯಕ್ತಿಕ ಶೌಚಗೃಹಗಳಿಗೆ 3ನೇ ಕಂತಿನ ಸಹಾಯಧನ, ಸಣ್ಣ ಉದ್ದಿಮೆಗೆ ಸಹಾಯಧನ, ಬಿಇ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಣ್ಣೂರ ಪುರಸಭೆಯ ವ್ಯಾಪ್ತಿಯ ಅರ್ಹರು ಜೂ. 20ರೊಳಗಾಗಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ವಿಷಯ ನಿರ್ವಾಹಕ ಹಾಗೂ ಕಾರ್ಯಾಲಯದ ವೆಬ್‌ಸೈಟ್ ವಿಳಾಸ www.konnurtown. mrc.gov.in ಮಾಹಿತಿ ಪಡೆಯಬಹುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.