ಜಿಲ್ಲೆ

ಕೃಷ್ಣಾ ನದಿ ಪ್ರವಾಹ ಅಬ್ಬರ; ಜಮೀನುಗಳಿಗೆ ನುಗ್ಗಿದ ನೀರು

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ 1.50ಲಕ್ಷ ಕ್ಯೂಸೆಕ್ ನೀರು ಬರುತ್ತಿದ್ದು, ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ.

ಒಂದೇ ದಿನದಲಿ ಕೃಷ್ಣಾ ನದಿ ಒಳಹರಿವಿನಲ್ಲಿ ಗಣನೀಯ ಪ್ರಮಾಣ ಏರಿಕೆ ಕಂಡಿದೆ. ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಳಿ ನೀರು ನುಗ್ಗಿದ ಪರಿಣಾಮ ಎರಡು ಸಾವಿರ ಹೆಕ್ಟರ್‌ಕ್ಕಿಂತಲೂ ಅಧಿಕ ಪ್ರದೇಶ ಜಲಾವೃತಗೊಂಡಿದೆ.ಅಪಾಯಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ.

ನದಿಗೆ ಇಳಿಯದಂತೆ ನದಿಪಾತ್ರದ ಜನರಿಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ.