ಜಿಲ್ಲೆ

ಕೃಷ್ಣಾ, ಘಟಪ್ರಭಾ ನದಿ ದಡದಲ್ಲಿ ಶುರುವಾಯಿತು ನೆರೆಯ ಆತಂಕ!

ಮಂಜುನಾಥ ಕೋಳಿಗುಡ್ಡ

-ಕೃಷ್ಣಾ, ಘಟಪ್ರಭಾ ನೀರಿನ ಒಳ ಹರಿವು ಹೆಚ್ಚಳ ಸೇತುವೆಗಳ ಮುಳಗಡೆ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಅರ್ಭಟ ಮುಂದುವರಿದಿದ್ದು, ಕೃಷ್ಣಾ, ಘಟಪ್ರಭಾ, ದೂದ ಗಂಗಾ ನದಿ ನೀರಿನ ಒಳ ಹರಿವು ಹೆಚ್ಚಳವಾಗಿದೆ.ಮತ್ತೊಂದೆಡೆ 10ಸೇತುವೆಗಳ ಮುಳಗಡೆಯಾಗಿವೆ.

ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಜಲಾವೃತ.

ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ ಕಾರದಗಾ-ಭೋಜ ನಡುವಿನ ಸೇತುವೆ ಜಲಾವೃತ. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ.ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತದ ಸೂಚನೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂದಗಂಗಾ ನದಿ.

ಕಾರದಗಾ ಗ್ರಾಮದ ಬಂಗಾಲಿಬಾಬಾ ದರ್ಗಾ ಸುತ್ತುವರೆದ ನೀರು.

ಗ್ರಾಮದ ಹೊರ ವಲಯದಲ್ಲಿರುವ ಬಂಗಾಲಿಬಾಬಾ ದರ್ಗಾ.

ಕ್ರಮೇಣ ಏರಿಕೆ ಆಗುತ್ತಿರುವ ನದಿ ನೀರು ಗ್ರಾಮಕ್ಕೆ ನುಗ್ಗುವ ಆತಂಕ.ಪ್ರವಾಹದ ಭೀತಿಯಲ್ಲಿ ಕಾರದಗಾ ಗ್ರಾಮದ ಜನರು.

ಕೃಷ್ಣಾ ನದಿನ ನೀರಿನ‌ಮಟ್ಟ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಜಲಾಶಯಗಳಿಂದ‌ ಕೃಷ್ಣಾ ನದಿಗೆ 1.25ಲಕ್ಷ ಕ್ಯೂಸೆಕ್ ನೀರು ಹರಿದು ಬಿಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ತಾಲೂಕಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆ.