ಬೆಳಗಾವಿ: ನಗರಕ್ಕೆ ನೀರು ಸರಬರಾಜು ಮಾಡುವ ಹಿಡಕಲ್ ಜಲಾಶಯ ಹಾಗೂ ರಕ್ಕಸಕೊಪ್ಪದಲ್ಲಿ ನೀರಿನ ಸಂಗ್ರಹದ ಪ್ರಮಾಣ ಮಳೆ ಬಾರದೆ ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ನೀರು ನಿಯಮಿತವಾಗಿ ಬಳಕೆ ಮಾಡಬೇಕು.
ಜಲಾಶಯಗಳಲ್ಲಿ ದಿನ ನಿತ್ಯದ ನೀರಿನ ಮಟ್ಟ ಕ್ರಮೇಣ ಇಳಿಕೆಯಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರನ ಬೇಡಿಕೆಗೆ ಅನುಗುಣವಾಗಿ ಪೂರೈಸಲು ತೊಂದರಯಾಗಬಹುದಾಗಿದೆ. ಆದ್ದರಿಂದ ನೀರು ಅಮೃತವಾದ ಸಂಪನ್ಮೂಲ. ಅಗತ್ಯಕ್ಕೆ ಅನಗುಣವಾಗಿ ನೀರುನ್ನು ನ್ಯಾಯೋಚಿತವಾಗಿ ಬಳಕೆ ಮಾಡುವ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ. ಸಾರ್ವಜನಿಕರು ಈಗಿನಿಂದಲೇ ನೀರನ್ನು ಮಿತವಾಗಿ ಬಳಸಿ, ನೀರನ್ನು ಪೋಲು ಮಾಡದೇ. ಬರುವ ಬೇಸಿಗೆಯನ್ನು ಎದುರಿಸಲು ಮಹಾನಗರ ಪಾಲಿಕೆಗೆ ಸಹಕರಿಸಿಬೇಕು ಎಂದು ಮಹಾನಗರ ಪಾಲಿಕೆಯ ಪರವಾಗಿ ಕೆಯುಐಡಿಎಫ್‌ಸಿ ಅಧೀಕ್ಷಕ ಅಭಿಯಂತರ ಅಶೋಕ ಬುರಕುಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.