ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ದೇವನಹಳ್ಳಿಯಿಂದ ಹೊಸೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಬಾಲ್ಲೇಪುರ ಸಮೀಪ ಅಳವಡಿಸಿರುವ ನಾಮಫಲಕದಲ್ಲಿ ವಿಜಯಪುರದ ಹೆಸರನ್ನು ತಪ್ಪಾಗಿ ನಮೂದಿಸಿದ್ದು, ಇದನ್ನು ಸರಿಪಡಿಸಬೇಕು ಎಂದು ಮುಖಂಡ ಮಲ್ಲೇಪುರ ಗಿರೀಶ್ ಒತ್ತಾಯಿಸಿದ್ದಾರೆ.
ವಿಜಯಪುರದಿಂದ ಚನ್ನರಾಯಪಟ್ಟಣ ಮೂಲಕ ಹೊಸಕೋಟೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಕನ್ನಡದಲ್ಲಿ ಅಳವಡಿಸಿರುವ ಬಹುತೇಕ ಊರುಗಳ ಹೆಸರು ತಪ್ಪಾಗಿವೆ. ಕೂಡಲೇ ಹೆದ್ದಾರಿ ಪ್ರಾಧಿಕಾರ ಸರಿಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ದಾಬಸ್‌ಪೇಟೆಯಿಂದ ತಮಿಳುನಾಡುವರೆಗೂ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿನ ತಪ್ಪುಗಳನ್ನು ನವೆಂಬರ್ 1ರೊಳಗೆ ಸರಿಪಡಿಸಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಕರುನಾಡ ಸೇನೆ ತಾಲೂಕು ಅಧ್ಯಕ್ಷ ಕೇಶವ ತಿಳಿಸಿದ್ದಾರೆ.