ಜಿಲ್ಲೆ

ಬರವಣಿಗೆ ಒಳಗೊಂಡಿರಲಿ ಸಾಮಾಜಿಕ ಬದ್ಧತೆ - ಸಾಹಿತಿ ಡಾ.ಯಲ್ಲಪ್ಪ

ಬೆಳಗಾವಿ: ಸಮಾಜದಿಂದ ಮನ್ನಣೆಗೊಳಗಾಗುವ ಸಾಹಿತಿಗಳು ಸಮಾಜಕ್ಕೆ ಬದ್ಧರಾಗಿ ಬರೆಯಬೇಕು. ರೈತರು, ಮಹಿಳೆಯರು, ದಲಿತರು ಮತ್ತು ತುಳಿತಕ್ಕೊಳಗಾದ ಸಮುದಾಯದ ಪರವಾಗಿ ಸಾಹಿತ್ಯ ರಚಿಸಿ, ಬದುಕಿನಲ್ಲೂ ಆ ಬದ್ಧತೆ ಪ್ರದರ್ಶಿಸಬೇಕು ಎಂದು ಬಂಡಾಯ ಸಾಹಿತಿ
ಡಾ. ಯಲ್ಲಪ್ಪ ಹಿಮ್ಮಡಿ ಸಲಹೆ ನೀಡಿದ್ದಾರೆ.

ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯ ನೂತನ ಸಂಚಾಲಕರ ಆಯ್ಕೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ಧ್ವನಿಯೆತ್ತಿ ಮಾನವ ಹಕ್ಕುಗಳ ರಕ್ಷಕರಾಗಬೇಕು. ಅದುವೇ ನಿಜವಾದ ಬಂಡಾಯ ಸಾಹಿತ್ಯ ಎಂದರು.

ರೈತರಿಗೆ ಬೆಂಬಲ: ಇಂದು ನಮ್ಮ ದೇಶದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕು. ಅನ್ನ ನೀಡುವ ನೆಲದವ್ವನ ಮಕ್ಕಳ ಕುರಿತು ಸಾಹಿತ್ಯ ರಚನೆ ನಮ್ಮ ಮೊದಲ ಆದ್ಯತೆಯಾಗಬೇಕು. ಇಡೀ ಕನ್ನಡ ಸಾಹಿತ್ಯವೇ ಕಾಯಕ
ಜೀವಿಗಳ ಸಂವೇದನೆಯಾಗಿ ಮೂಡಿ ಬಂದಿರುವುದು ನಮ್ಮ ಸಾಹಿತ್ಯ ಪರಂಪರೆಯ ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರನ್ನಾಗಿ ಅಡಿವೆಪ್ಪ ಇಟಗಿ, ದೇಮಣ್ಣ ಸೊಗಲದ, ನದೀಂ ಸನದಿ, ಸುಧಾ ಕೊಟಬಾಗಿ ಅವರನ್ನು ಆಯ್ಕೆ ಮಾಡಲಾಯಿತು. ಶಂಕರ ಬಾಗೇವಾಡಿ, ಸಿದ್ರಾಮ ತಳವಾರ, ರಾಕೇಶ ಪೂಜೇರಿ, ಮೇಘಾ ಗೌಡ ಇತರರಿದ್ದರು.ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಸುಧಾ ಕೊಟಬಾಗಿ, ದೇಮಣ್ಣ ಸೊಗಲದ ವಂದಿಸಿದರು. ಅದುವೇ ನಿಜವಾದ ಬಂಡಾಯ ಸಾಹಿತ್ಯ ಎಂದರು.

ರೈತರಿಗೆ ಬೆಂಬಲ: ಇಂದು ನಮ್ಮ ದೇಶದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕು. ಅನ್ನ ನೀಡುವ ನೆಲದವ್ವನ ಮಕ್ಕಳ ಕುರಿತು ಸಾಹಿತ್ಯ ರಚನೆ ನಮ್ಮ ಮೊದಲ ಆದ್ಯತೆಯಾಗಬೇಕು. ಇಡೀ ಕನ್ನಡ ಸಾಹಿತ್ಯವೇ ಕಾಯಕ
ಜೀವಿಗಳ ಸಂವೇದನೆಯಾಗಿ ಮೂಡಿ ಬಂದಿರುವುದು ನಮ್ಮ ಸಾಹಿತ್ಯ ಪರಂಪರೆಯ ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರನ್ನಾಗಿ ಅಡಿವೆಪ್ಪ ಇಟಗಿ, ದೇಮಣ್ಣ ಸೊಗಲದ, ನದೀಂ ಸನದಿ, ಸುಧಾ ಕೊಟಬಾಗಿ ಅವರನ್ನು ಆಯ್ಕೆ ಮಾಡಲಾಯಿತು. ಶಂಕರ ಬಾಗೇವಾಡಿ, ಸಿದ್ರಾಮ ತಳವಾರ, ರಾಕೇಶ ಪೂಜೇರಿ, ಮೇಘಾ ಗೌಡ ಇತರರಿದ್ದರು.ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಸುಧಾ ಕೊಟಬಾಗಿ, ದೇಮಣ್ಣ ಸೊಗಲದ ವಂದಿಸಿದರು.