ಬಾಗಲಕೋಟೆ:ಸಾಮಾಜಿಕ, ಶೈಣಿಕ ಗಣತಿ ಸೆ. 22 ರಂದು ಆರಂಭಗೊಳ್ಳಲಿದ್ದು, ಧರ್ಮ ಕಾಲಂನಲ್ಲಿ ಹಿಂದು ಎಂದು ಜಾತಿ ಕಾಲಂನಲ್ಲಿ ಕಮ್ಮಾರ, ಉಪಜಾತಿ ಕಂಬಾರ ಎಂದು ಬರೆಯಿಸಬೇಕು ಎಂದು ಜಿಲ್ಲಾ ಕಮ್ಮಾರ ೇಮಾಭಿವೃದ್ಧಿ ಸಂದ ಮುಖಂಡ ಬಸವರಾಜ ಕಮ್ಮಾರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣತಿಗೆ ಅಧಿಕಾರಿಗಳು ಬಂದಾಗ ಗೊಂದಲಕ್ಕೆ ಒಳಗಾಗದೆ ಸಂದ ನಿರ್ಧಾರದ ಪ್ರಕಾರವೇ ಹಿಂದು, ಕಮ್ಮಾರ, ಕಂಬಾರ ಎಂದು ಸಮರ್ಪಕ ಮಾಹಿತಿ ನೀಡಬೇಕು ಎಂದರು.
ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಕಮ್ಮಾರ ಎಂದು ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಅಧ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.ಕಮ್ಮಾರ ಸಮುದಾಯವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಇನ್ನು ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಮುದಾಯದ ಜನರಿಗಾಗಿ ತಲುಪಲು ಸರ್ಕಾರ ಕಮ್ಮಾರರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಯಲ್ಲಪ್ಪ ಕಮ್ಮಾರ, ಬಸವರಾಜ, ಗೂಳಪ್ಪ ಕಮ್ಮಾರ, ಜ್ಯೋತಿಬಾ ಕಮ್ಮಾರ, ರಮೇಶ ಕಮ್ಮಾರ ಇದ್ದರು.