ಮುಧೋಳ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗಂಗಾಶಂಕರ ಸರಗಣಾಚಾರಮಠ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಡಾ.ಶಿವಾನಂದ ಕುಬಸದ, ನ್ಯಾಯವಾದಿ ಪ್ರಕಾಶ ವಸ್ತ್ರದ, ಬಂಡಾಯ ಸಾಹಿತಿ ಅಶೋಕ ಚಿಚಖಂಡಿ, ಬಸಮ್ಮ ಭಜಂತ್ರಿ ಇದ್ದರು. 
ಜಿಲ್ಲೆ

ಮನಸ್ಸಿನ ತೃಪ್ತಿಗಾಗಿ ಕಾವ್ಯ ರಚಿಸಿ

Vijayapura - Desk - Gurappa Lokuri

ಮುಧೋಳ: ನಮ್ಮ ಮನಸ್ಸಿನ ತೃಪ್ತಿಗಾಗಿ ಕಾವ್ಯ ರಚಿಸಿದರೆ ನಾವು ಬರೆಯುವ ಕವಿತೆ ಕವಿ ಹೃದಯ ಅರಳಿಸುವಂತೆಮಾಡುತ್ತದೆ ಎಂದು ವೈದ್ಯ ಸಾಹಿತಿ ಡಾ. ಶಿವಾನಂದ ಕುಬಸದ ಹೇಳಿದರು.

69ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗಂಗಾಶಂಕರ ಸರಗಣಾಚಾರಮಠ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವೋದಯ ಕಾಲಘಟ್ಟದಲ್ಲಿ ಯಾವೂದೇ ಕಟ್ಟು ಪಾಡಿಗೆ ಜೋತು ಬೀಳದೆ ಹೊಸತನದಲ್ಲಿ ಹುಟ್ಟಿರುವ ಬಹುತೇಕ ಕಾವ್ಯಗಳು ಕವಿಹೃದಯವನ್ನು ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಕವಿಗೋಷ್ಠಿಯಿಂದ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ದಂತಾಗುತ್ತದೆ. ಇಂತಹ ವೇದಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣವಾಗಲಿ ಎಂದರು.

ಹಿರಿಯ ಸಾಹಿತಿ ಬಾಪು ಖಾಡೆ ಮಾತನಾಡಿ, ಓದುವುದನ್ನೇ ಮರೆಯುವ ಈ ಕಾಲದಲ್ಲಿ ನಾವು ರಚನೆ ಮಾಡಿದ ಕವಿತೆ ಓದುಗರನ್ನು ಆಕರ್ಷಿಸುವ ಶಕ್ತಿ ಹೊಂದಿರಬೇಕು ಎಂದರು.

ಹಿರಿಯರಾದ ಮಲ್ಲಿಕಾರ್ಜುನ ಮುದಕವಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಬಸವರಾಜ ಕೊಣ್ಣೂರ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸರ್ಕಾರಿ ನೌಕರರ ಅಧ್ಯಕ್ಷ ಪ್ರಕಾಶ ಹೊಸಮನಿ, ಮಂಜುನಾಥ ಪರೀಟ್, ಶಿವಪ್ರಕಾಶ ಸರಗಣಾಚಾರಮಠ, ರಮೇಶ ಅಣ್ಣಿಗೇರಿ, ಯುವಕವಯಿತ್ರಿ ಅನಿತಾ ಪಾಟೀಲ ಸೇರಿ ಇತರರಿದ್ದರು. ಲಕ್ಷ್ಮೀ ಹಾರೊಗೊಪ್ಪ ನಿರೂಪಿಸಿದರು.

ನ್ಯಾಯವಾದಿ ಪ್ರಕಾಶ ವಸ್ತ್ರದ, ಬಂಡಾಯ ಸಾಹಿತಿ ಅಶೋಕ ಚಿಚಖಂಡಿ, ಬಸಮ್ಮ ಭಜಂತ್ರಿ, ಸುರೇಶ ರಾಜಮಾನೆ, ನಿಂಗಪ್ಪ ಮುದ್ದಾಪುರ, ಶಿವಾನಂದ ಹೊಸಟ್ಟಿ, ಸಿದ್ದು ಮೂಲಿಮನಿ, ಸವಿತಾ ಅಂಗಡಿ, ಗುರುನಾಥ ಹುದ್ದಾರ, ಗಣಪತಿ ಗಲಗಲಿ, ಗಿರಿಜಾ ಪಾಟೀಲ, ಮಹಾಂತೇಶ ಕುಂಬಾರ, ಉಮಾ ಕಾತರಕಿ, ವಿಜಯಲಕ್ಷ್ಮೀ ಕಗಲಗೊಂಬ ಇತರರು ಕವನ ವಾಚಿಸಿದರು.