ಹಟ್ಟಿ ಪಪಂ ಅಧಿಕಾರಿ ಚಂದ್ರಶೇಖರಗೆ ಶ್ರೀರಾಮ ಸೇನೆ ಸಂಘಟನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ರಘುಗೌಡ ನಾಯಕ, ಪ್ರಮುಖರಾದ ರಾಜುರಡ್ಡಿ, ಅರುಣ, ನಿಂಗಪ್ಪ, ಚಂದ್ರು, ನಿಂಗರಾಜ, ಅಮರೇಶ, ಬಸವರಾಜ, ರಾಜು ಇತರರಿದ್ದರು. 
ಜಿಲ್ಲೆ

ಉರ್ದು ಬರೆಸಿದರೆ ಕಪ್ಪು ಮಸಿ ಬಳಿದು ಹೋರಾಟ

ನರೇಶ್ ಕುಮಾರ್

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಪಂಚಾಯಿತಿ ನಾಮಫಲಕದಲ್ಲಿ ಉರ್ದು ಬರೆಸಿದರೆ ಕಪ್ಪು ಮಸಿ ಬಳಿದು ಹೋರಾಟ ಮಾಡಲಾಗುವುದೆಂದು ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ರಘುಗೌಡ ನಾಯಕ ಎಚ್ಚರಿಸಿದರು.

ಹಟ್ಟಿ ಪಪಂ ಅಧಿಕಾರಿ ಚಂದ್ರಶೇಖರಗೆ ಮನವಿ ಸಲ್ಲಿಸಿ ಮಾತನಾಡಿದರು. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಪಂ ಕಚೇರಿಯ ನಾಮಫಲಕದಲ್ಲಿ ಉದು ಭಾಷೆಯನ್ನೂ ಬಳಸಬೇಕೆಂದು ಇಬ್ಬರು ಸದಸ್ಯರು ಕೋರಿದ್ದಾರೆ. ಅದಕ್ಕೆ ಮುಖ್ಯಾಧಿಕಾರಿಗಳು ಡಿಸಿ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದು ಖಂಡನೀಯ.

ಅಲ್ಲದೆ ಅಧ್ಯಕ್ಷ ಎಂಡಿಆರ್ ಸಂಧಾನಿ ಅವರು ಕನ್ನಡ ಭಾಷೆ ಹಾಗೂ ಜನರಿಗೆ ಅಪಮಾನ ಮಾಡುತ್ತಿದ್ದು, ಉರ್ದು ನಾಮಫಲಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಸೇನೆಯ ಹಟ್ಟಿ ಘಟಕ ಅಧ್ಯಕ್ಷ ರಾಜುರಡ್ಡಿ, ಮುಖಂಡರಾದ ಅರುಣ, ನಿಂಗಪ್ಪ, ಚಂದ್ರು, ನಿಂಗರಾಜ, ಅಮರೇಶ, ಬಸವರಾಜ, ರಾಜು, ರಮೇಶ, ಕುಮಾರ ಇತರರಿದ್ದರು.