ಜಿಲ್ಲೆ

ಕುಸ್ತಿ ಪಂದ್ಯಾವಳಿ ನಿಯಮ ಪಾಲನೆ ಅಗತ್ಯ

Haveri - Desk - Ganapati Bhat

ಹಂಸಭಾವಿ: ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲನೇ ದಿನದ ಕುಸ್ತಿ ಪಂದ್ಯಾವಳಿಗೆ ಕುಸ್ತಿ ಸಮಿತಿ ಅಧ್ಯಕ್ಷ ಶಿವಾನಂದಯ್ಯ ಹಳ್ಳೂರಮಠ ಚಾಲನೆ ನೀಡಿದರು.

ಕ್ರೀಡಾಪಟುಗಳು ಯಾವುದೇ ರೀತಿಯ ಹೊಂದಾಣಿಕೆಯ ಆಟ ಆಡಬಾರದು ಅಂತಹ ಆಟಗಾರರು ಕಂಡು ಬಂದರೆ ಅವರನ್ನು ಕುಸ್ತಿ ಪಂದ್ಯಾವಳಿಯಿಂದ ಹೊರಹಾಕಲಾಗುವುದು ಎಂದರು.

ಮೈಸೂರು ಜೆ.ಎಸ್.ಎಸ್. ಮಹಾವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಬಿ. ಹುಚಗೊಂಡ್ರ ಮಾತನಾಡಿ, ಆಟಗಳಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಪಂದ್ಯಾಳುಗಳು ನಿರ್ಣಾಯಕರ ತೀರ್ಪಿಗೆ ತಲೆಬಾಗಿ ಆಟ ಆಡಬೇಕು ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಹುಚಗೊಂಡ್ರ, ಈರಣ್ಣ ಪೂಜಾರ, ಮಂಜುನಾಥ ಬಾದಾಮಿ, ಶಿವಯೋಗಿ ಬಸಪ್ಪನವರ,ಪ್ರಶಾಂತ ಪಾಟೀಲ, ಚನ್ನಬಸಪ್ಪ ಮುದ್ದಿನಕೊಪ್ಪ ಇತರರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮುಂಡಗೋಡ, ಕಾರವಾರ, ಹಳಿಯಾಳ, ಕಲಬುರಗಿ ಹೀಗೆ ರಾಜ್ಯದ ವಿವಿಧೆಡೆಯಿಂದ ಪೈಲ್ವಾನರು ಭಾಗವಹಿಸಿದ್ದರು.