ಜಿಲ್ಲೆ

ಬೀದರ್ ಮುಖಂಡರಿಂದ ಬಿಹಾರದಲ್ಲಿ ಪ್ರಚಾರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್‍ನ ಕಾಂಗ್ರೆಸ್ ಮುಖಂಡರು ಬಿಹಾರದ ಮುಜಾಫರ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯೇಂದ್ರ ಚೌಧರಿ ಪರ ಸೋಮವಾರ ವಿವಿಧೆಡೆ ಪ್ರಚಾರ ನಡೆಸಿ ಗಮನ ಸೆಳೆದರು.

ಜಿಲ್ಲೆಯವರೇ ಆದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ, ಮುಖಂಡರಾದ ರಾಜರತನ್ ಸಿಂಧೆ, ರತ್ನದೀಪ್ ಕಸ್ತೂರೆ, ಅಕ್ರಂ ಪಾಶಾ, ಶೇಕ್ ಮುಜಮ್ಮಿಲ್ ಮತ್ತಿತರರು ಕ್ಷೇತ್ರದ ಲಕ್ಷ್ಮಿನಗರ, ಬ್ರಹ್ಮಪುರ, ಮೋತಿಜ್‍ಮೈದಾನ, ತಿಲಕನಗರದಲ್ಲಿ ಮನೆಗೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪರ ಮತ ಯಾಚಿಸಿದರು. ಮುಜಾಫರ್‍ಪುರ ವಿಧಾನಸಭಾ ಕ್ಷೇತ್ರಕ್ಕೆ ನ. 6 ರಂದು ಚುನಾವಣೆ ನಡೆಯಲಿದೆ.