ಬೀದರ್: ಇಲ್ಲಿನ ಮೈಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ಅಧ್ಯಕ್ಷರಾಗಿ ಗಂಗಾಧರ ಹೊಸಳ್ಳಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೊಸಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ ಮಾಶೆಟ್ಟಿ ಚಿದ್ರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಗಿದೆ. ಸಂಘದ ನಿರ್ದೇಶಕರಾದ ವಿಜಯಕುಮಾರ ಎಂ., ಚಂದ್ರಕಾಂತ, ಎಂ.ಡಿ. ಶಫಿಯೊದ್ದೀನ್ ಕರೀಮ್, ವಿಜಯಕುಮಾರ ಬಸವರಾಜ, ವಸಂತ, ಶ್ರೀಕಾಂತ, ಈಶ್ವರಿ, ಸುವರ್ಣಾ, ವೈಜಿನಾಥ ಇತರರಿದ್ದರು.