ಜಿಲ್ಲೆ

ಗೌರಿ ಶುಗರ್ ನೌಕರರಿಗೆ ಸಕ್ಕರೆ ಉಡುಗೊರೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಭಾಲ್ಕಿ ತಾಲ್ಲೂಕಿನ ಬಾಜೋಳಗಾ ಸಮೀಪದ ಓಂಕಾರ ಗ್ರೂಪ್‍ನ ಗೌರಿ ಶುಗರ್ ಆ್ಯಂಡ್ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್ (ಯುನಿಟ್ ಸಂಖ್ಯೆ 13) ದೀಪಾವಳಿಗೆ ತನ್ನ ನೌಕರರಿಗೆ ತಲಾ 10 ಕೆ.ಜಿ. ಸಕ್ಕರೆ ಉಡುಗೊರೆಯಾಗಿ ನೀಡಿದೆ.

ಓಂಕಾರ ಗ್ರೂಪ್ ಚೇರ್‍ಮೆನ್ ಬಾಬುರಾವ್ ಪಾಟೀಲ ಬೋತ್ರೆ ಅವರ ನಿರ್ದೇಶನದ ಮೇರೆಗೆ ಕಾರ್ಖಾನೆ ಆವರಣದಲ್ಲಿ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಶುಕ್ಲಾ ಹಾಗೂ ಯುನಿಟ್ 2 ರ ಪ್ರಧಾನ ವ್ಯವಸ್ಥಾಪಕ ಮಾಯಂದೆ ಅವರು ಜಂಟಿಯಾಗಿ ನೌಕರರಿಗೆ ಸಕ್ಕರೆ ವಿತರಿಸಿದರು.

ಬಾಬುರಾವ್ ಪಾಟೀಲ ಬೋತ್ರೆ ಅವರು ಕಾರ್ಖಾನೆಯನ್ನು ನೌಕರ ಸ್ನೇಹಿಯಾಗಿ ಮುನ್ನಡೆಸುತ್ತಿದ್ದಾರೆ. ಸದಾ ನೌಕರರ ಹಿತ ರಕ್ಷಿಸುತ್ತಾ ಬಂದಿದ್ದಾರೆ. ಈ ಬಾರಿ ಹಬ್ಬಕ್ಕೆ ಸಕ್ಕರೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಪ್ರಧಾನ ವ್ಯವಸ್ಥಾಪಕ ಮಹಾವೀರ ಘೋಡ್ಕೆ, ಯುನಿಟ್ ಮುಖ್ಯಸ್ಥ ರವೀಂದ್ರ ಪಾಟೀಲ, ಕಬ್ಬು ಪ್ರಧಾನ ವ್ಯವಸ್ಥಾಪಕ ಕಾಶೀನಾಥ ಕಾಡಾದಿ, ಮುಖ್ಯ ಎಂಜಿನಿಯರ್ ಅವಿನಾಶ ಬಿರಾದಾರ, ಪ್ರೊಸೆಸ್ ಮುಖ್ಯಸ್ಥ ಸುಭಾಷ್ ಬಿರಾದಾರ, ಎಲೆಕ್ಟ್ರಿಕಲ್ ಡಿಜಿಎಂ ರವಿಶಂಕರ, ಬಾಯ್ಲರ್ ಪ್ರಧಾನ ವ್ಯವಸ್ಥಾಪಕ ಉಲ್ಲಾಸ್ ಭೋಸ್ಲೆ, ಡಿಸ್ಟಲರಿ ವ್ಯವಸ್ಥಾಪಕರಾದ ನವನಾಥ ಪವಾರ್, ಸಂಜಯಕುಮಾರ ಪಾಟೀಲ, ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ರಘುನಾಥ ದೇಸಾಯಿ, ವೀರೇಶ ಎಸ್. ಹಲಿಂಗೆ, ಮುಖ್ಯ ಲೆಕ್ಕಾಧಿಕಾರಿ ಸಚಿನ್ ಕಾಸೆಕರ್, ಕಾರ್ಖಾನೆಯ ಎಲ್ಲ ಅಧಿಕಾರಿಗಳು ಹಾಗೂ ಕಾರ್ಮಿಕರು ಹಾಜರಿದ್ದರು.