ಬೀದರ್: ತಾಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ಎಸ್ಎಸ್ಕೆ)ಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಕಲಬುರಗಿ ಹೈಕೋರ್ಟ್ ತೆರವುಗೊಳಿಸಿದ್ದ, ಅ. 23ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಕಾರ್ಖಾನೆ ಆವರಣದಲ್ಲಿ ಮತದಾನ ನಿಗದಿಯಾಗಿದೆ.
ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸೆ.27ರಂದು ಮತದಾನ ನಿಗದಿಯಾಗಿತ್ತು. ಆದರೆ ಚುನಾವಣೆ ಅಸೂಚನೆ ಪ್ರಶ್ನಿಸಿ ಹೈಕೋಟ್ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರಿಂದ ತಡೆಯಾಜ್ಞೆ ನೀಡಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನ ತೆರವುಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಯಾವ ಹಂತದಲ್ಲಿ ನಿಂತಿದ್ದು, ಅದೇ ಹಂತದಿಂದ ಪ್ರಾರಂಭಿಸಿ 15 ದಿನಗಳೊಳಗಾಗಿ ನಿಯಮಾನುಸಾರ ಫಲಿತಾಂಶ ಘೋಷಿಸಲು ಕೋಟ್೯ ತೀರ್ಪು ನೀಡಿದ್ದರಿಂದ ಅ.23ರಂದು ಮತದಾನ ನಿಗದಿಪಡಿಸಲಾಗಿದೆ ಎಂದು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ ಕೇಂದ್ರ ಹಾಗೂ ಮತದಾನ ನಡೆಯುವ ಆವರಣದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮತ ಚಲಾಯಿಸಲು ಬರುವ ಮತದಾರರು ಕಾರ್ಖಾನೆಯಿಂದ ಜಾರಿಯಾದ ಅಕೃತ ಗುರುತಿನ ಚೀಟಿ ತಂದು ಮತ ಚಲಾವಣೆ ಮಾಡಬೇಕು. ಚುನಾವಣೆ ಸುಗಮವಾಗಿ ನಡೆಸುವ ಸಂಬಂಧ ಸಕಲ ಸಿದ್ಧತೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.