ಜಿಲ್ಲೆ

ಐ ಲವ್ ಆರೆಸ್ಸೆಸ್ ಅಭಿಯಾನಕ್ಕೆ ಚಾಲನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರೆಸ್ಸೆಸ್ ಪ್ರೀತಿಸುತ್ತಾರೆ (ಐ ಲವ್ ಆರೆಸ್ಸೆಸ್) ಪೋಷ್ಟರ್ ಅಭಿಯಾನಕ್ಕೆ ನಗರದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಇಲ್ಲಿನ ಜೆಸ್ಕಾಂ ಕಚೇರಿ ಹತ್ತಿರದ ಹನುಮಾನ ಮಂದಿರ ಬಳಿ ಜಮಾಯಿಸಿದ ಸಂಘದ ಸ್ವಯಂ ಸೇವಕರು ಅಭಿಯಾನಕ್ಕೆ ಚಾಲನೆ ನೀಡಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಡೆಸುವುದನ್ನು ನಿಷೇಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನು ನೋಡಿದರೆ ಖರ್ಗೆ ಹುಚ್ಚು ನಾಯಿ ಕಡಿದಂತೆ ವತಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರಹಂತ ಸಾವಳೆ ಆರೋಪಿಸಿದರು.

ಖರ್ಗೆ ಅವರೇ ಒಮ್ಮೆ ಸಂಘದ ಸಮಸ್ತ್ರ ಧರಿಸಿ ನೋಡಿ. ಅದರ ತಾಕತ್ತು ಏನು ಎನ್ನುವುದು ಗೊತ್ತಾಗುತ್ತದೆ. ದೇಶ, ರಾಜ್ಯಕ್ಕೆ ಸಂಕಷ್ಟ ಬಂದಾಗ ಸಂಘ ಹಾಗೂ ಸ್ವಯಂ ಸೇವಕರು ಕೆಲಸ ಮಾಡುತ್ತಾರೆ. ಸಾಮಾಜಿಕ ಕೆಲಸಗಳ ಮೂಲಕ ದೇಶ, ವಿದೇಶದಲ್ಲಿ ಸಂಘ ಹೆಸರು ಮಾಡಿದೆ. ಸಂಘದ ಕಾರ್ಯ ಚಟುವಟಿಕೆ ನಿಷೇಸಬೇಕೆಂದು ಖರ್ಗೆ ನೀಡಿದ ಹೇಳಿಕೆಗೆ ಖಂಡಿಸಲಾಗುವುದು ಎಂದರು.

ಪ್ರಮುಖ ಗಣೇಸ ಭೋಸ್ಲೆ, ಭೀಮಣ್ಣ ಸೋರಳ್ಳಿ, ನವಿನ್ ಚಿಟ್ಟಾ, ಸುರ ಕುಲಕರ್ಣಿ, ನಾಗರಾಜ ಸುಲ್ತಾನಪುರೆ, ವಿಶಾಲ ಪಾಟೀಲ್, ಪ್ರಶಾಂತ ಬಿರಾದಾರ್, ಸಂಜಯ ಕುಲಕರ್ಣಿ, ಗೋವಿಂದ ಜಾಲಿ, ಶಿವಶಂಕರ ಫುಲೆ ಇತರರಿದ್ದರು.