ಜಿಲ್ಲೆ

ರಾಜ್ಯೋತ್ಸವಕ್ಕೆ ನಿರಗುಡಿ ಶ್ರೀಗೆ ಆಹ್ವಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕನ್ನಡ ಸೇನೆ-ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ 66ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಆಗಮಿಸುವಂತೆ ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರಿಗೆ ಆಹ್ವಾನ ನೀಡಲಾಯಿತು.

ನಗರದಲ್ಲಿ ಇತ್ತೀಚೆಗೆ ಸಂಘಟನೆ ಅಧ್ಯಕ್ಷ ಕೆ.ಆರ್. ಕುಮಾರ್ ಪೂಜ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿ ಮಾತನಾಡಿ, ಅ.31 ಮತ್ತು ನ.1ರಂದು ಬೆಂಗಳೂರಿನಲ್ಲಿ ಅದ್ದೂರಿ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಹವಾ ಮಲ್ಲಿನಾಥ ಶ್ರೀ ಸೇರಿ ಪೂಜ್ಯರು, ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಭಾಗದ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಸುಭಾಷ ಕೆನಾಡೆ, ಪ್ರಮುಖರಾದ ಪಪ್ಪು ಪಾಟೀಲ್ ಖಾನಾಪುರ, ರಾಜು, ರವಿ ಸ್ವಾಮಿ ನಿರ್ಣಾ, ಪವನ್ ಪೂಜಾರಿ, ಹಮೀದ್, ರಮೇಶ, ಚನ್ನಬಸವ ಘಾಳೆ ಇತರರಿದ್ದರು.