ಜಿಲ್ಲೆ

ಕನ್ಹೇರಿ ಶ್ರೀ ವಿರುದ್ಧ ಕೇಸ್ ದಾಖಲಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಆಗ್ರಹಿಸಿದ್ದಾರೆ.

ಕಾಡಸಿದ್ದೇಶ್ವರ ಶ್ರೀಗಳು ಹೊಂಬ ಮತ್ತು ಅವಾಚ್ಯ ಶಬ್ಧಗಳನ್ನು ಬಳಸಿ ಬಸವ ತತ್ವ್ವ ನಿಷ್ಠ್ಠ ಸ್ವಾಮೀಜಿಗಳ ಬಗ್ಗೆ ಅನಾಗರಿಕನಂತೆ ಮಾತನಾಡಿದ್ದನ್ನು ಖಂಡಿಸಲಾಗುವುದು. ಕೂಡಲೇ ಹೇಳಿಕೆ ವಾಪಸ್ ಪಡೆದು, ಬಹಿರಂಗ ಕ್ಷಮೆ ಕೇಳಬೇಕು ಎಂದು ಇಲ್ಲಿ ಹೊರಡಿಸಿದ ಪ್ರಕರಟಣೆಯಲ್ಲಿ ಆಗ್ರಹಿಸಿದ್ದಾರೆ.

ದೇಶ ಪ್ರೇಮ ಬಂದಾಗ ನಾವೆಲ್ಲರೂ ಭೌಗೋಳಿವಾಗಿ ಹಿಂದುಗಳು. ರಾಷ್ಟ್ರ ಮೊದಲು, ಧರ್ಮ ನಂತರ ತತ್ವ, ಸಿದ್ಧಾಂತದಂತೆ ಲಿಂಗಾಯತ ಮಠಾಶರು, ಬಸವ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಬಸವ ತತ್ವ ನಾಡಿನಲ್ಲಿ ದೇಶಭಕ್ತಿ ಸಮಾನತೆ, ಸಹಬಾಳ್ವೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಲಿಂಗಾಯತ ಶ್ರೀಗಳು ಮಾಡುತ್ತಿದ್ದಾರೆ. ಇದನ್ನು ಸಹಿಸದ ಕನ್ಹೇರಿ ಸ್ವಾಮಿ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.