ಚಿಟಗುಪ್ಪ: ಧರ್ಮ ಹಾಗೂ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ಯೋಗದಾನ ಎಲ್ಲರಿಗೂ ಮಾದರಿ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಇತ್ತೀಚೆಗೆ ತಾಲೂಕಿನ ಮನ್ನಾಏಖೇಳ್ಳಿಯ ಬಾಲಮ್ಮ ದೇವಿಯ 25ನೆಯ ಜಾತ್ರಾ ಮಹೋತ್ಸವದಲ್ಲಿ ರಾಜಶೇಖರ ಶ್ರೀ ಅವರ ತುಲಾಭಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಪೂಜ್ಯರ ಕೊಡುಗೆ ಅಪಾರ ಎಂದರು.
ಬಾಲಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಒಂದು ವಾರ ಪ್ರವಚನ ಮೂಲಕ ಈ ಭಾಗದಲ್ಲಿ ಶ್ರೀಗಳು ಧರ್ಮ ಜಾಗೃತಿ ಮೂಡಿಸಿದ್ದಾರೆ.
ಪೂಜ್ಯರನ್ನು ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಬಾಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹನುಮಂತಪ್ಪ ಮರಕುಂದಾ, ಉಪಾಧ್ಯಕ್ಷ ಆನಂದ ಮರಕುಂದಾ, ಸ್ವಾಗತ ಸಮಿತಿ ಅಧ್ಯಕ್ಷ ಶಂಕರರಾವ ಜೊತಗೊಂಡ, ಉದ್ಯಮಿ ಸಂತೋಷ ರಾಸೂರೆ, ಪ್ರಮುಖರಾದ ಈಶ್ವರ ಬಸರಡ್ಡಿ, ಸಂತೋಷ ಕಮಲಪುರ, ರೇವಣಸಿದ್ದಯ್ಯ ಸ್ವಾಮಿ , ರಮೇಶ ಕ್ಯಾತ, ಸಂಜು ಪಾಂಚಾಳ, ಡಾ.ಮಲ್ಲಿಕಾರ್ಜುನ ಮರಕುಂದಾ, ನವಲಿಂಗ ಪಾಟೀಲ್, ಮಲ್ಲಿಕಾರ್ಜುನ ಮರಪಳ್ಳಿ, ಕಿರಣ್ ಬೆಲ್ದಾಳೆ, ಮಲ್ಲಯ್ಯ ಸ್ವಾಮಿ, ಶ್ರೀನಿವಾಸ ಸ್ವಾಮಿ, ನಾಗಯ್ಯ ಸ್ವಾಮಿ, ಗಂಗಾಧರ ಮರಕುಂದಾ ಇತರರಿದ್ದರು.