ಜಿಲ್ಲೆ

ವಿಳಾಸಪುರದಲ್ಲಿ ಜಾತ್ರೋತ್ಸವ ಶುರು

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿಳಾಸಪುರ ಗ್ರಾಮದಲ್ಲಿ ಶ್ರೀ ಮುರಳೀಧರ ಮಹಾರಾಜರ 15ನೇ ಪುಣ್ಯಸ್ಮರಣೆ ಸಪ್ತಾಹ ಹಾಗೂ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ. ಸೆ.30ರಂದು ಶುರುವಾದ ಜಾತ್ರೆಯಲ್ಲಿ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಶುಕ್ರವಾರ ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರಿಂದ ಪ್ರವಚನ, ಶನಿವಾರ ಗುಂಡಪ್ಪ ಶರಣರು ಮತ್ತು ರಮೇಶ ಅವರ ಕೀರ್ತನೆ ನಡೆಯಿತು. ಭಾನುವಾರ ರಾತ್ರಿ 8ಕ್ಕೆ ಕಾಶಿರಾಮ ಮಹಾರಾಜರ ಪ್ರವಚನವಿದೆ. ಸೋಮವಾರ ಸಂಜೆ 4.30ಕ್ಕೆ ಶ್ರೀ ದತ್ತಾತ್ರಿ ಮಹಾರಾಜರಿಂದ ಧುನಿ ಪೂಜೆ ನಂತರ ಮಹಾಪ್ರಸಾದ, ಅ.7ರಂದು ಸಂಗೀತ ಭಜನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಮುಖರಾದ ಭಾನುದಾಸ ಪಾಟೀಲ್, ಪರಮೇಶ್ವರ ಪಾಟೀಲ್, ರಾಜಕುಮಾರ ಸ್ವಾಮಿ, ಶಾಂತಕುಮಾರ ಸ್ವಾಮಿ, ದತ್ತು ಸಾಗರ್, ಬಸಪ್ಪ ಹಳೆಂಬರೆ ಮನವಿ ಮಾಡಿದ್ದಾರೆ.