ಬೀದರ್: ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ರೂ. 8.32 ಲಕ್ಷ ನಿವ್ವಳ ಲಾಭ ಗಳಿಸಿದೆ.
ಇಲ್ಲಿಯ ದೇವಿ ಕಾಲೊನಿಯ ದೇವಿ ಮಂದಿರದಲ್ಲಿ ಇರುವ ರೇವಪಯ್ಯ ಫಂಕ್ಷನ್ ಹಾಲ್‍ನಲ್ಲಿ ನಡೆದ ಸಂಘದ 29ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಿದ್ದಯ್ಯ ಕವಡಿಮಠ್ ಈ ಮಾಹಿತಿ ನೀಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಸಂಘದ ಲಾಭದಲ್ಲಿ ಹೆಚ್ಚಳವಾಗಿದೆ. ಬರುವ ದಿನಗಳಲ್ಲಿ ಸಂಘ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಯೋಜಿಸಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮೋಳಕೇರಿ ವಾರ್ಷಿಕ ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷ ಉದಯಕುಮಾರ ಲದ್ದೆ, ನಿರ್ದೇಶಕರಾದ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಮಲ್ಲಿಕಾರ್ಜುನ ಪಾಟೀಲ, ಚನ್ನಬಸಯ್ಯ ಗಣಾಚಾರಿ, ಬಸವಂತರಾವ್ ಬಿರಾದಾರ, ಕಾಶಿನಾಥ ಸೂರ್ಯವಂಶಿ, ಓಂಕಾರ ಪಾಟೀಲ, ಬಸವರಾಜ ಶೇರಿಕಾರ್, ಶಿವರಾಜ ಮದಕಟ್ಟಿ, ಶೀಲಾ ಬಿರಾದಾರ, ಉಷಾ ಮಿರ್ಚೆ ಇದ್ದರು.