ಜಿಲ್ಲೆ

ಆತ್ಮನಿರ್ಭರ ಕಾರ್ಯಾಗಾರ 25ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ನಿಮಿತ್ತ ಜಿಲ್ಲಾ ಮಟ್ಟದ ಕಾರ್ಯಾಗಾರ ಗುರುವಾರ ಬೆಳಗ್ಗೆ 10.30ಕ್ಕೆ ನೌಬಾದ್ ಬಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಅಭಿಯಾನ ಜಿಲ್ಲಾ ಸಂಚಾಲಕ ಬಾಬು ವಾಲಿ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ಸಿ ಎಂ.ಜಿ. ಮುಳೆ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಶಕುಂತಲಾ ತೆಂಗಳಿ ಪಾಲ್ಗೊಳ್ಳುವರು. ರಾಜಶೇಖರ ನಾಗಮೂರ್ತಿ ವಿಶೇಷ ಉಪನ್ಯಾಸ ನೀಡುವರು. ಅಪೇಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಕೋನದ ವಿಸ್ತರಣೆಯಾಗಿದ್ದು, ಭಾರತವನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಆತ್ಮನಿರ್ಭರಗೊಳಿಸುವ ಗುರಿ ಹೊಂದಿದೆ. ಸೆ.25(ಪಂಡಿತ ದೀನ್ದಯಾಳ್ ಉಪಾಧ್ಯಾಯ ಜನ್ಮ ದಿನ)ರಿಂದ ಡಿ.25(ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ)ವರೆಗೆ ಅಭಿಯಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಭಿಯಾನ ನಿಮಿತ್ತ ವ್ಯಾಪಾರಿಗಳ ಸಮ್ಮೇಳನ, ಮನೆ-ಮನೆ ಭೇಟಿ, ದಸರಾ, ದೀಪಾವಳಿ ಹಬ್ಬದಲ್ಲಿ ಸ್ವದೇಶಿ ವಸ್ತುಗಳ ಬಳಕೆ, ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ, ಭಾಷಣ, ನಿಬಂಧ, ರಂಗೋಲಿ ಸ್ಪಧರ್ೆ, ಉದ್ಯೋಗ ಮೇಳ, ಸ್ವಸಹಾಯ ಗುಂಪುಗಳ ಸಮಾವೇಶ, ಯುವ ಮತ್ತು ಮಹಿಳಾ ಸಮ್ಮೇಳನದಂಥ ನಾನಾ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.