ಬೀದರ್: ಬೀದರ್‍ನ ಕಲಾವಿದರು ರಾಜಸ್ತಾನದ ಮೌಂಟ್ ಅಬುದಲ್ಲಿ ನಡೆದ ಗರಿಷ್ಠ ಕಾರ್ಯ ಕ್ಷಮತೆಗಾಗಿ ಕೆಲಸದ ಜೀವನ ಸಮತೋಲನ ಕುರಿತ ಸಮ್ಮೇಳನ ಹಾಗೂ ಧ್ಯಾನ ಶಿಬಿರದಲ್ಲಿ ಆಕರ್ಷಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು.
ಪುಷ್ಪಾಂಜಲಿ, ದಶಾವತಾರ, ಮಹಿಷ ಮರ್ಧಿನಿ, ದೇಶ ಭಕ್ತಿ ಗೀತೆ, ಕರ್ನಾಟಕ ಜಾನಪದ ನೃತ್ಯ, ಮರಾಠಿ ನೃತ್ಯ,
ಬ್ರಹ್ಮಕುಮಾರಿ ಗೀತೆಯ ತಾಳಕ್ಕೆ ತಕ್ಕಂತೆ ಸುಂದರ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಮುಖರು, ಗಣ್ಯರು, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಕೆ. ಸತ್ಯಮೂರ್ತಿ, ಶಿಕ್ಷಕ ದೇವಿದಾಸ ಜೋಶಿ ಇದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸಮ್ಮೇಳನ ಸಂಘಟಿಸಲಾಗಿತ್ತು.