ಜಿಲ್ಲೆ

ಕಟ್ಟಡ ಕಾರ್ಮಿಕರ ಸಂಘಕ್ಕೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಿದ್ರಿ ಜಿಲ್ಲಾ ಕರ್ನಾಟಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಬೀದರ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪದಾಧಿಕಾರಿಗಳ ಹೆಸರು ಹೀಗಿವೆ. ಡಾ. ಸಂತೋಷಕುಮಾರ (ಅಧ್ಯಕ್ಷ), ದಿನೇಶ್ ಪವಾರ್ (ಉಪಾಧ್ಯಕ್ಷ) ಹಾಗೂ ರಾಜಕುಮಾರ ಟಿಳೇಕರ್ (ಪ್ರಧಾನ ಕಾರ್ಯದರ್ಶಿ).

ನೇಮಕಾತಿ ಪತ್ರ ವಿತರಣೆ: ನಗರದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ತಾನಾಜಿ ಸಗರ್, ಅಧ್ಯಕ್ಷ ಅಭಿಮಾನ್ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಶ್ರೀಮಂಗಲೆ ಇದ್ದರು.