ಜಿಲ್ಲೆ

7ರಿಂದ ಆನಂದ ಅನುಭೂತಿ ಶಿಬಿರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಆರ್ಟ್ ಆಫ್ ಲಿವಿಂಗ್ ವತಿಯಿಂದ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ಸೆ. 7 ರಿಂದ 12 ರ ವರೆಗೆ ಆನಂದ ಅನುಭೂತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರವು ಪ್ರತಿ ದಿನ ಸಂಜೆ 6 ರಿಂದ 8 ರ ವರೆಗೆ ಜರುಗಲಿದೆ ಎಂದು ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಕಾಮಶೆಟ್ಟಿ ಚಿಕ್ಕಬಸೆ ತಿಳಿಸಿದ್ದಾರೆ.

ಶಿಬಿರದಲ್ಲಿ ದೈಹಿಕ ಆರೋಗ್ಯ ಹಾಗೂ ಮನಃಶಾಂತಿಗೆ ನೆರವಾಗುವ ಸುದರ್ಶನ ಕ್ರಿಯೆಯನ್ನು ಕಲಿಸಿಕೊಡಲಾಗುವುದು ಎಂದು ಹೇಳಿದ್ದಾರೆ.