ಜಿಲ್ಲೆ

ಬಸವ ಸಂಸ್ಕೃತಿ ಅದ್ಭುತ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಸವ ಸಂಸ್ಕೃತಿ ಅದ್ಭುತವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಐಎಂಎ ಹಾಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಆಧಾರಿತ ಜಿಲ್ಲಾಮಟ್ಟದ ನಿಬಂಧ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವ ಸಂಸ್ಕೃತಿ ಇವನಾರವ, ಇವನಾರವ ಎನ್ನದೆ, ಎಲ್ಲರನ್ನು ಇವ ನಮ್ಮವ, ಇವ ನಮ್ಮವ ಎಂದು ಅಪ್ಪಿಕೊಳ್ಳುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಕಠಿಣ ಪರಿಶ್ರಮದಿಂದ ಯಾವುದೇ ವಿಷಯದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.

ಬೀದರ್ ಬಸವ ಸಂಸ್ಕøತಿ ಅಭಿಯಾನ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ನಗರದಲ್ಲಿ ಸೆ. 3 ರಂದು ಬಸವ ಸಂಸ್ಕøತಿ ಅಭಿಯಾನ ಜರುಗಲಿದೆ. ಅಭಿಯಾನವನ್ನು ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಸವ ಸಂಸ್ಕøತಿ ಅಭಿಯಾನಕ್ಕೆ ಭರದ ಸಿದ್ಧತೆಗಳು ನಡೆದಿವೆ. ಬಸವಾನುಯಾಯಿಗಳು ಅಭಿಯಾನದ ಯಶಸ್ವಿಗೆ ಸಹಕರಿಸಬೇಕು. ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಸ್ಪರ್ಧೆಯನ್ನು ಉದ್ಘಾಟಿಸಿದರು.

ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಪರಿಷತ್ ಸದಸ್ಯ ಹಾವಶೆಟ್ಟಿ ಪಾಟೀಲ, ಹುಲಸೂರಿನ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಮಲ್ಲಮ್ಮ ಆರ್. ಪಾಟೀಲ, ಉಷಾ ಮಿರ್ಚೆ, ಸಂಗಶೆಟ್ಟಿ ಬಿರಾದಾರ, ಭಗವಾನ್ ಬಿರಾದಾರ, ರಾಜು ಕಮಠಾಣೆ, ವೀರಶೆಟ್ಟಿ ಪಾಟೀಲ, ಜಗದೀಶ್ ಪಾಟೀಲ, ಪ್ರದೀಪ್ ನಂದಿ ಇದ್ದರು.

ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ರೂಪಾ ಪಾಟೀಲ ಸ್ವಾಗತಿಸಿದರು. ಉಮೇಶ ಗಾಯತೊಂಡ ವಂದಿಸಿದರು.

ಮಳೆಯಲ್ಲೂ 10ನೇ ತರಗತಿಯಿಂದ ಪದವಿವರೆಗಿನ ಜಿಲ್ಲೆಯ ವಿವಿಧೆಡೆಯ 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಸಂಗಶೆಟ್ಟಿ ಶೆಟಕಾರ್, ಶಿವಲಿಂಗ ಹೇಡೆ, ಬಸವರಾಜ ಬಲ್ಲೂರ, ಜಯದೇವಿ ಯದಲಾಪುರೆ ತೀರ್ಪುಗಾರರಾಗಿದ್ದರು.