ಜಿಲ್ಲೆ

ಅರಸು ಜನ್ಮದಿನ ಆಚರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಗರದ ಐ.ಎಂ.ಎ. ಹಾಲ್‍ನಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನ ಆಚರಿಸಲಾಯಿತು.

ಕಾಂಗ್ರೆಸ್ ಮೀನುಗಾರರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಟಿ. ಕಾಶೆಂಪುರ ಅವರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ, ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್, ಉಪಾಧ್ಯಕ್ಷ ತಾನಾಜಿ ಸಗರ್, ಪ್ರಮುಖರಾದ ಸಂದೀಪ್ ಪಾಟೀಲ, ಮಹೇಶ್ ಪಾಂಚಾಳ್, ರಾಜಕುಮಾರ ಟಿಳ್ಳೆಕರ್, ಸಂಗಯ್ಯ ಸುಲ್ತಾನಪುರೆ, ಅನಿಲ್ ಉಪ್ಪಾರ, ಶಂಕರರಾವ್ ಬಿರಾದಾರ, ಶೈಲೇಂದ್ರ ಹಿವಾರೆ, ಪುಂಡಲೀಕರಾವ್ ಲಿಂಗದಾಳೆ ಮತ್ತಿತರರು ಇದ್ದರು.