ಬೀದರ್: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಒಂದು ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಹೇಳಿದರು.
ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಅರುಣೋದಯ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಗಸ್ಟ್ 31 ರ ವರೆಗೆ ಪ್ರತಿ ತಾಲ್ಲೂಕು, ವಲಯ ಮಟ್ಟದಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಸಂಘದ ಕಲಬುರಗಿ ವಿಭಾಗ ಪ್ರಮುಖ ಚಂದ್ರಶೇಖರ ಪಾಟೀಲ ಮಾತನಾಡಿ, ಸಂಘವು ಆರು ದಶಕಗಳಿಂದ ಶಿಕ್ಷಕರ ಸಂಘಟನೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಾ ಬಂದಿದೆ. ಶಿಕ್ಷಕರು ಸಂಘಟನೆಯ ಶಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಶಿಕ್ಷಕರೂ ಸದಸ್ಯತ್ವ ಪಡೆಯುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಹೇಳಿದರು.
ಶಾಲೆಯ 30 ಶಿಕ್ಷಕರು ಸಂಘದ ಸದಸ್ಯತ್ವ ಪಡೆದರು. ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಮುಖ್ಯಶಿಕ್ಷಕರಾದ ಲಕ್ಷ್ಮಣ ಪೂಜಾರಿ, ನರಸಾರೆಡ್ಡಿ, ಸಂತೋಷ ಸೋಲಪುರೆ, ಉಮಾಕಾಂತ ಮೀಸೆ, ಆನಂದ ಜಾಧವ್, ರಮೇಶ ಪಾಟೀಲ, ಸುಮೀತ್ ಮಂಗಳೂರೆ, ರವೀಂದ್ರ ಹೂಗಾಡೆ, ಮಾರುತೆಪ್ಪ ಗೋರನಳ್ಳಿ, ಪ್ರಶಾಂತ, ಗಣಪತಿ, ಪೀಟರ್, ಅಲ್ಕಾವತಿ ಹೊಸದೊಡ್ಡೆ ಮತ್ತಿತರರು ಇದ್ದರು. ನೀಲಮ್ಮ ಗಜಲೆ ನಿರೂಪಿಸಿದರು. ಮಮತಾ ಮಂಗಳೂರೆ ವಂದಿಸಿದರು.